ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಪ್ರತಿಭಟನೆ: ಅರಣ್ಯ, ಕಂದಾಯ ಇಲಾಖೆಯಿಂದ ರೈತರಿಗೆ ವಂಚನೆ – ಕಿಶೋರ್ ಶಿರಾಡಿ ಆರೋಪ

Picture of Savistara

Savistara

Bureau Report

ಕಡಬ (ಉಪ್ಪಿನಂಗಡಿ): ಕಸ್ತೂರಿ ರಂಗನ್ ವರದಿ ಜಾರಿಯಿಂದ ಅರಣ್ಯ ಮತ್ತು ಕಂದಾಯ ಇಲಾಖೆಯ ವಶದಲ್ಲಿರುವ ಜನರ ಜಮೀನಿನ ಪಟ್ಟಾ ನೀಡುತ್ತಿಲ್ಲ, ಹಕ್ಕು ಪತ್ರ ನೀಡುತ್ತಿಲ್ಲ. ಮಲೆನಾಡು ಜನರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕಿಶೋರ್ ಶಿರಾಡಿ ಆರೋಪಿಸಿದರು.

ಕಡಬದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, 1889ರ ದಾಖಲೆಗಳು ನಮ್ಮಲ್ಲಿವೆ, ಅರಣ್ಯ ಇಲಾಖೆ ರಾಜಕಾರಣಿಗಳ ಮೋಸ ಮಾಡಬಹುದು. ಆದರೆ ರೈತ ಮೋಸ ಮಾಡಲು ಸಾಧ್ಯವಿಲ್ಲ. ನೂರಾರು ವರ್ಷಗಳಿಂದ ಈ ಭೂಮಿಯಲ್ಲಿ ಕೃಷಿ ಮಾಡಿ ಬದುಕುತ್ತಿರುವ ನಮಗೆ ನೋಟಿಸ್ ನೀಡುವ ಅಧಿಕಾರವನ್ನು ಯಾರು ಕೊಟ್ಟಿದ್ದಾರೆ? ನಾವು ವಿಧ್ಯಾಭ್ಯಾಸ ಮಾಡಿಲ್ಲ ಎಂದರು.

ಒಂದು ವೇಳೆ ಈ ಯೋಜನೆ ಜಾರಿಗೊಂಡರೆ ನಮ್ಮ ಆದಾಯದ ಕೇಂದ್ರಗಳು ಉಳಿಯುವುದಿಲ್ಲ. ನಮಗೆ ನೈಸರ್ಗಿಕ ನಮ್ಮ ಬದುಕು ಬೇಡಿ ತಾಗುತ್ತದೆ. ನಮ್ಮ ಯುವಕರು ಇರುವವರೆಗೂ ಕಸ್ತೂರಿ ರಂಗನ್ ವರದಿ ಜಾರಿಯಾಗಲು ನಾವು ಬಿಡುವುದಿಲ್ಲ. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ನಮ್ಮ ಬೇಡಿಕೆಗಳ ಈಡೇರುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ಹಲವು ವರ್ಷಗಳ ಹೋರಾಟದ ಬಳಿಕ ಸರ್ಕಾರ ಕಲ್ಲು ತೆರವು, ಆದರೆ ನಮ್ಮ ಹೋರಾಟ ಬಲಗೊಳ್ಳಬೇಕು. ನಮ್ಮ ಬೆಳೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸಬೇಕು.

ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ತನಕ ನಮ್ಮ ಹೋರಾಟ ನಡೆಯಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದೆಯೂ ಧರಣಿ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಮಹಮ್ಮದ್ ಅಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರುದ್ಧ ಕಳೆದ 13 ವರ್ಷಗಳಿಂದ ಹೋರಾಟ ಹೊರತಾದ ನಮಗೆ ಬಂದಿದೆ. ಅರಣ್ಯ ಮತ್ತು ಬಾಯಿಯ ಕಡೆ ಅಸಮಾಧಾನ ಬರುವಾಗ ಯಾರಿಗೂ ಕಂಡು ಬರುತ್ತಿದೆ. ಹಾಗಾಗಿ ನಮ್ಮ ಹೋರಾಟದ ರೀತಿಯನ್ನು ಬದಲಾಯಿಸಬೇಕು. ಕೂಡಿಕಲು ಹೋರಾಟಕ್ಕೆ ನಾವು ಮುಂದಾಗುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಬದುಕನ್ನು ಬೀದಿಪಾಲು ಮಾಡುವ ಯೋಜನೆಗೆ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು.

ಜನರ ಸಮಸ್ಯೆಗಳನ್ನು ಅರಿತ ಕೇಂದ್ರ ಸರ್ಕಾರ ಈ ಕಸ್ತೂರಿ ರಂಗನ್ ವರದಿಯನ್ನು ಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ರೋಶನ್ ಪಡುವನಕಾರ್, ಲೋಕೇಶ್ ದೋಂತಿ, ಕಿಶೋರ್ ಗೌಡ ಮೂಗುರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ರೈ ಮಾಣಿಕೊಡೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವಿಧಾನಸಭಾ ಘಟಕದ ನಿಸಾರ್ ಬಾಳೆತೊಟ್ಟ ಮುಂತಾದವರು ಉಪಸ್ಥಿತರಿದ್ದರು.ಕಸ್ತೂರಿ ರಂಗನ್ ವರದಿ ವಿರುದ್ಧ ಕಡಬದಲ್ಲಿ ಭಾರಿ ಪ್ರತಿಭಟನೆ – ರೈತರಿಗೆ ಅರಣ್ಯ, ಕಂದಾಯ ಇಲಾಖೆಯಿಂದ ವಂಚನೆ: ಕಿಶೋರ್ ಶಿರಾಡಿ

[t4b-ticker]
error: Content is protected !!