ಓದಿ ಉದ್ಯೋಗ ಗಿಟ್ಟಿಸಿಕೊಳ್ಳದೆ ಚಹಾ ಮಾರಲು ಹೇಳಿದವರಾರು: ಮೋದಿಗೆ ದೀಪೈ

Picture of Savistara

Savistara

Bureau Report

ಮುಂಬೈ: ‘ನಾನು ಚಹಾ ಮಾರಿದ್ದೇನೆ ಎಂದು ನೀವು (ಪ್ರಧಾನಿ ಮೋದಿ) ಯಾವಾಗಲೂ ಹೇಳುತ್ತಿರುತ್ತೀರಿ, ನೀವು ಚಹಾ ಏಕೆ ಮಾರಿದ್ದೀರಿ?, ನಿಮಗೆ ಚಹಾ ಮಾರಲು ಹೇಳಿದವರಾರು?, ನೀವು ಶಾಲೆಗೆ ಹೋಗಬಹುದಿತ್ತು, ಓದಬಹುದಿತ್ತು, ಕೆಲಸ ಗಳಿಸಬಹುದಿತ್ತು’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಷ್ಟೆ ಕಿಚಾಯಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಗಾಂಧಿ ಜಯಂತಿಯಂದು ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಿಂದ ತನ್ನ ಎರಡನೇ ಆವೃತ್ತಿಯ ಅಭಿಯಾನವನ್ನು (ಜ್ಞಾನೇಶ್ ಹಟಾವೊ) ಸಿಜೆಪಿ ಆರಂಭಿಸಿದೆ.ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ದೀಪೈ, ‘ಮೋದಿ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದಿತ್ತು. ಆದರೆ, ನೋಟು ರದ್ದತಿ, ಕೋವಿಡ್ ಲಸಿಕೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸೇರಿದಂತೆ ಕಳೆದ 12 ವರ್ಷಗಳಿಂದ ಜನರು ಯಾವಾಗಲೂ ಸರತಿ ಸಾಲಿನಲ್ಲೇ ನಿಲ್ಲಬೇಕೆಂದು ಅವರು ಬಯಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.’ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಜಂತ‌ರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಎರಡು ತಿಂಗಳು ಕಳೆಯವುದರೊಳಗೆ ಮತ್ತೊಂದು ಪ್ರತಿಭಟನೆ ನಡೆಸಬೇಕಾಗಿ ಬಂದಿದೆ. ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು ಅಸಮರ್ಥವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿ’ ಎಂದು ಕಿಡಿಕಾರಿದ್ದಾರೆ.

‘ವಿಶ್ವಗುರು ಮೋದಿ ಅವರೇ, ‘ದೇಶವು ಗಾಂಧಿ ತತ್ವದ ಮೇಲೆ ನಡೆಯುತ್ತದೆಯೇ ಹೊರತು ಗೋಡೆಯಿಂದಲ್ಲ. ನೀವು ಗಾಂಧಿ, ಅಂಬೇಡ್ಕ‌ರ್, ನೆಹರೂ ಅವರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ’ ಎಂದು ದೀಪೆ ಗುಡುಗಿದ್ದಾರೆ.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಬಳಿಕ, ಸಿಜೆಪಿಯ ಎರಡನೇ ಪ್ರತಿಭಟನೆಗೆ ದೇಶದಾದ್ಯಂತ ಜೆನ್ ಝೀಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನೆ ಸ್ಥಳದಲ್ಲಿ ‘ಜ್ಞಾನೇಶ್ ಹೋಗಬೇಕು; ಪ್ರಜಾಪ್ರಭುತ್ವ ಉಳಿಯಬೇಕು, ಜ್ಞಾನೇಶ್ ಕಾಕಾ ರಾಜೀನಾಮೆ ಕೊಟ್ಟು ಹೋಗಿ’ ಎಂಬ ಘೋಷಣೆಗಳು ಮೊಳಗಿದವು.

1,000ಕ್ಕೂ ಹೆಚ್ಚು ಜನರ ಬಂಧನ

ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀದಿಗಿಳಿದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಯುವಜನರು, ವಿರೋಧ ಪಕ್ಷಗಳ ಮುಖಂಡರು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಭಾರದ್ವಾಜ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ, ನಾಯಕಿ ಬೃಂದಾ ಕಾರಟ್, ಎಎಪಿಯ ಸೌರಭ್ ಭಾರದ್ವಾಜ್, ಸಂಜೀವ್ ಝಾ, ಸಂಸದರಾದ ಮನೋಜ್ ಕೆ.ಝಾ, ಎ.ಎ ರಹೀಮ್, ಸಂಜಯ್ ಸಿಂಗ್, ಪಿ. ಸಂತೋಷ್ ಕುಮಾರ್, ಸಿಪಿಎಂಎಲ್‌ನ ಎನ್. ಸಾಯಿ ಬಾಲಾಜಿ, ವಿದ್ಯಾರ್ಥಿ ಮುಖಂಡರಾದ ನೇಹಾ ಬೋರಾ (ಎಐಎಸ್‌ಎ), ಸೃಜನ್ ಭಟ್ಟಾಚಾರ್ಯ, ಆದರ್ಶ ಎಂ. ಸಾಜಿ, ಐಶೆ ಘೋಷ್ (ಎಸ್‌ಎಫ್‌ಐ), ಸ್ವರಾಜ್ ಚಳವಳಿ ನಾಯಕ ಯೋಗೇಂದ್ರ ಯಾದವ್, ನಿಖಿಲ್ ದೇ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ 1,000ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

[t4b-ticker]
error: Content is protected !!