HDK, ಜೋಶಿ ಕೇಂದ್ರದಲ್ಲಿ ಕೆಲಸ ಮಾಡದೆ ರಾಜ್ಯದಲ್ಲಿ ಸಾಯ್ತಿದ್ದಾರೆ: MLA ವೆಂಕಟೇಶ್

Picture of Savistara

Savistara

Bureau Report

ಮೈಸೂರು: ‘ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಲ್ಲಾದ ಜೋಶಿ ದೆಹಲಿಯಲ್ಲಿದ್ದುಕೊಂಡು ದೇಶದ ಕೆಲಸ ಮಾಡುವುದು ಬಿಟ್ಟು, ರಾಜ್ಯಕ್ಕೆ ಬಂದು ಸಾಯ್ತಿದ್ದಾರೆ’ ಎಂದು ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್ ಟೀಕಿಸಿದರು.

ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಪ್ರಜಾಸೇವಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರಿಗೆ ಅಲ್ಲೇನೂ ಕೆಲಸವೇ ಇಲ್ಲ. ಬೆಳಿಗ್ಗೆ ಎದ್ದರೆ ಬೆಂಗಳೂರಿನಲ್ಲೇ ಇರುತ್ತಾರೆ. ಇಡೀ ದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೈದುಕೊಂಡು ಓಡಾಡುವುದೇ ಕೆಲಸವಾಗಿ ಹೋಗಿದೆ’ ಎಂದು ದೂರಿದರು.’ಡಿಕೆಶಿ ಮುಖ್ಯಮಂತ್ರಿಯಾದ ನಂತರ ಜೆಡಿಎಸ್‌ ಹಾಗೂ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟೊಂದು ಕ್ರಿಯಾಶೀಲವಾಗಿ ಜನರ ಕೆಲಸ ಮಾಡುತ್ತಿದ್ದಾರಲ್ಲಾ ಅಂತ ಹೊಟ್ಟೆಉರಿ ಬಂದಿರುವುದರಿಂದಲೇ ಇಲ್ಲಸಲ್ಲದ ಆರೋಪಗಳನ್ನು ಸರ್ಕಾರದ ವಿರುದ್ಧ ಹಾಗೂ ವೈಯಕ್ತಿಕವಾಗಿಯೂ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿ ಆಗಿದೆ ಎಂದು ಆರೋಪಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.’ಡಿಕೆಶಿ-ಸಿದ್ದರಾಮಯ್ಯ ಇಬ್ಬರೂ ಜೋಡೆತ್ತುಗಳಂತೆ ಚೆನ್ನಾಗಿದ್ದಾರೆ; ಒಟ್ಟಾಗಿಯೇ ಇದ್ದಾರೆ. ನಮ್ಮ ಸರ್ಕಾರ ಹಾಗೂ ಪಕ್ಷ ಎರಡೂ ಸುಭದ್ರವಾಗಿವೆ’ ಎಂದರು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!