ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಎರಡನೇ ಸ್ವರ್ಣ; ಪರ್ವೀನ್ ಹೂಡಾಗೆ ಚಿನ್ನ

Picture of Savistara

Savistara

Bureau Report

ಹೊಸದಿಲ್ಲಿ: ಭಾರತದ ಬಾಕ್ಸರ್ ಪರ್ವೀನ್ ಹೂಡಾ ಅವರುಶುಕ್ರವಾರ (ಅಕ್ಟೋಬರ್ 2) ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದರು. ಮಹಿಳೆಯರ 65 ಕೆಜಿ ವಿಭಾಗದ ಫೈನಲ್‌ನಲ್ಲಿ ಚೈನೀಸ್ ತೈಪೆಯ ನಿಯೆನ್-ಚಿನ್ ಚೆ ಅವರನ್ನು ಸೋಲಿಸಿ ಪರ್ವೀನ್ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು.26 ವರ್ಷದ ಪರ್ವೀನ್ ಅವರಿಗೆ ಇದು ಏಷ್ಯನ್ ಗೇಮ್ಸ್‌ನ ಮೊದಲ ಪದಕ. ಫೈನಲ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅವರು ಮೊದಲ ಸುತ್ತನ್ನು 5-0 ಅಂತರದಿಂದ ಗೆದ್ದರು. ಎರಡನೇ ಸುತ್ತಿನಲ್ಲಿ 0-5 ಅಂತರದಿಂದ ಸೋತರೂ, ನಿರ್ಣಾಯಕ ಮೂರನೇ ಸುತ್ತಿನಲ್ಲಿ 3-2 ಅಂತರದಿಂದ ಗೆದ್ದು ಚಿನ್ನ ತಮ್ಮದಾಗಿಸಿಕೊಂಡರು.

ಪರ್ವೀನ್ ಅವರ ಗೆಲುವಿನಿಂದ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಒಲಿಯಿತು. ಇದಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಲವಿನಾ ಬೊರ್ಗೊಹೈನ್ ಅವರು ಮಹಿಳೆಯರ 75 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.ಹರ್ಯಾಣದ ರೋಹ್ನಕ್ ಮೂಲದ ಪರ್ವೀನ್ ಅವರು ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. 2025ರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿರುವ ಅವರು, 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಹಾಗೂ 2022ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.ಏಷ್ಯನ್ ಗೇಮ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಮೂರನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಯೂ ಪರ್ವೀನ್ ಅವರದಾಗಿದೆ. 2014ರ ಏಷ್ಯನ್ ಗೇಮ್ಸ್‌ನಲ್ಲಿ ಎಂ.ಸಿ. ಮೇರಿ ಕೋಮ್ ಚಿನ್ನ ಗೆದ್ದಿದ್ದರು. 2026ರ ಕ್ರೀಡಾಕೂಟದಲ್ಲಿ ಲವಿನಾ ಬೊರ್ಗೊಹೈನ್ ಬಳಿಕ ಪರ್ವೀನ್ ಕೂಡ ಸ್ವರ್ಣ ಸಾಧನೆ ಮಾಡಿದ್ದಾರೆ.

[t4b-ticker]
error: Content is protected !!