ಮಂಗಳೂರು, ಸೆ.30: ಎಂಆರ್‌ಪಿಎಲ್‌ನ 3ನೇ ಹಂತದ ಕೋಕರ್ ಹೈಡೋ ಟ್ರೇಟರ್ ಘಟಕದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದು, ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರ್ಕಳದ ಹಿರ್ಗಾನ ನಿವಾಸಿ ರವಿ ಪೂಜಾರಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಎಂಆರ್‌ಪಿಎಲ್‌ನ 3ನೇ ಹಂತದಲ್ಲಿರುವ ಕೆ-ಸ್ಟಾರ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರವಿ ಪೂಜಾರಿ, ಮಧ್ಯಾಹ್ನ 12.15ರ ಸುಮಾರಿಗೆ ನೌಕರರಿಗೆ ಊಟ ವಿತರಿಸಲು ತೆರಳಿದ್ದ ವೇಳೆ ಕೋಕರ್ ಹೈಡೋ ಟೀಟರ್ ಘಟಕದಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಫೋಟದ ಪರಿಣಾಮ ರವಿ ಪೂಜಾರಿ ಸೇರಿದಂತೆ ಘಟಕದ ನೌಕರರಾದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್ ಹಾಗೂ ಶರತ್ ಶೆಟ್ಟಿ ಗಾಯಗೊಂಡಿದ್ದಾರೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೋಕರ್ ಹೈಡೋ ಟೀಟರ್ ಘಟಕದ ಯಂತ್ರೋಪಕರಣಗಳನ್ನು ಘಟಕದ ಮುಖ್ಯಸ್ಥರು ಹಾಗೂ ಎಂಆರ್‌ಪಿಎಲ್ ಸಂಸ್ಥೆಯವರು ಸಮರ್ಪಕವಾಗಿ ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಬಿಎನ್‌ಎಸ್‌ನ ಕಲಂ 287, 125(ಬಿ) ಹಾಗೂ 106 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅವಳಿ ಸಹೋದರರಲ್ಲಿ ಕಿರಿಯ
ಮೃತ ಮನೀಶ್ ಕರ್ಕಡ ಅವರು ಮುಲ್ಕಿ ಹಳೆಯಂಗಡಿ ನಿವಾಸಿ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ ಅವಳಿ ಮಕ್ಕಳಲ್ಲಿ ಕಿರಿಯವರಾಗಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಗುತ್ತಿಗೆ ನೌಕರರಾಗಿ ಎಂಆರ್‌ಪಿಎಲ್ ಸೇರಿದ್ದರು. ಉತ್ತಮ ಕಬಡ್ಡಿ ಆಟಗಾರರಾಗಿದ್ದ ಅವರು ಹಳೆಯಂಗಡಿಯ ಸಿಎಸ್‌ಐ ಅಮ್ಮಾನ್ ಮೆಮೋರಿಯಲ್ ಚರ್ಚ್‌ನ ಸದಸ್ಯರಾಗಿದ್ದರು.
ವೆನಾಕ್‌ನಲ್ಲಿ ಕುಟುಂಬಸ್ಥರ ಆಕ್ರೋಶ
ಮನೀಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಹಾಕ್ ಆಸ್ಪತ್ರೆಗೆ ತರಲಾಗಿದ್ದು, ಶವಾಗಾರದ ಬಳಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಎಂಆರ್‌ಪಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಕುರಿತು ಕಂಪನಿ ಆಡಳಿತದೊಂದಿಗೆ
















































