ಮಂಗಳೂರು ರೈಲ್ವೆ ವಿಭಾಗ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕ್ಯಾ.ಚೌಟ | ಗೋವಾ-ಮಂಗಳೂರು ವಂದೇ ಭಾರತ್ ಬೆಂಗಳೂರಿಗೆ ವಿಸ್ತರಣೆ ಪುತ್ತೂರಿನಲ್ಲಿ ನಿಲುಗಡೆ

Picture of Savistara

Savistara

Bureau Report

ಪುತ್ತೂರು: ಮಂಗಳೂರು ರೈಲ್ವೆ ವಿಭಾಗವು ಪಾಲಕ್ಕಾಡ್ ವಿಭಾಗದಿಂದ ಮುಕ್ತಿ ಪಡೆದು ಕರ್ನಾಟಕದ ಮೈಸೂರು ವಿಭಾಗದ ಅಧೀನಕ್ಕೆ ಸೇರ್ಪಡೆಯಾಗುತ್ತಿರುವ ಈ ಸುಸಂದರ್ಭದಲ್ಲಿ ಕರಾವಳಿ ಭಾಗಕ್ಕೆ ಮತ್ತೊಂದು ದೊಡ್ಡ ಕೊಡುಗೆ ಲಭಿಸಿದೆ.

ಕೇಂದ್ರ ರೈಲ್ವೆ ಇಲಾಖೆಯು ಗೋವಾ – ಮಂಗಳೂರು ವಂದೇ ಭಾರತ್ ರೈಲನ್ನು ರಾಜಧಾನಿ ಬೆಂಗಳೂರಿನವರೆಗೆ ವಿಸ್ತರಿಸಿ ಮಂಗಳೂರು ರೈಲ್ವೆಯ ಮೂಲಸೌಕರ್ಯ ಹಾಗೂ ಅಭಿವೃದ್ಧಿಗೆ ಹೊಸ ವೇಗ ನೀಡಿದೆ.

ಅಲ್ಲದೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮನವಿಯ ಫಲವಾಗಿ ಕರಾವಳಿಗರ ಕನಸಿನ ವಂದೇ ಭಾರತ್ ರೈಲು ಪುತ್ತೂರಿನಲ್ಲೂ ನಿಲುಗಡೆಗೊಳ್ಳಲಿದ್ದು (ಕಬಕ ಪುತ್ತೂರು ನಿಲ್ದಾಣ), ಸುತ್ತಮುತ್ತಲಿನ ಹತ್ತಾರು ಊರಿನ ಸಾವಿರಾರು ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಲಿದೆ.ಕರಾವಳಿಯ ರೈಲ್ವೆ ಅಭಿವೃದ್ಧಿಗೆ ಶ್ರಮಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ, ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ರಾಜ್ಯ ಸಚಿವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

[t4b-ticker]
error: Content is protected !!