ಮಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಗೆಲುವಿನ ಕ್ಷಣದಲ್ಲಿ ರಾಜ್ಯ ಸರ್ಕಾರದ ಒಂದು ಅಭಿನಂದನಾ ಕರೆ ಕೂಡ ಬಾರದಿರುವುದು ಕ್ರೀಡಾ ವಲಯದಲ್ಲಿ ಅಸಮಾಧಾನ ಮೂಡಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂವಮ್ಮ, “ಇತರ ರಾಜ್ಯಗಳವರು ಚಿನ್ನ ಗೆದ್ದಾಗ ಅವರ ಸಿಎಂ, ಕ್ರೀಡಾ ಸಚಿವರು ತಕ್ಷಣ ಕರೆ ಮಾಡಿದರು. ಆದರೆ ನಾನು ಚಿನ್ನ ಗೆದ್ದಾಗ ಯಾರೂ ಕರೆ ಮಾಡಲಿಲ್ಲ. ಪಕ್ಕದ ಕ್ರೀಡಾಪಟುಗಳು ‘ನಿನ್ನ ರಾಜ್ಯದಿಂದ ಯಾರು ಕರೆ ಮಾಡಿದರು’ ಎಂದು ಕೇಳಿದಾಗ ಏನು ಹೇಳಬೇಕೋ ತೋಚಲಿಲ್ಲ” ಎಂದು ನೋವಿನಿಂದ ಹೇಳಿದ್ದಾರೆ.23 ವರ್ಷಗಳಿಂದ ಕರ್ನಾಟಕವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಪೂವಮ್ಮ, ದೇಶಕ್ಕೆ ಹಲವು ಪದಕಗಳನ್ನು ತಂದುಕೊಟ್ಟಿದ್ದಾರೆ. ಆದರೆ ಭಾರತಕ್ಕೆ ವಾಪಸ್ ಬಂದ ನಂತರ ಮಾತ್ರ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲ ಗಣ್ಯರಿಂದ ಕರೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.ಕ್ರೀಡಾಪಟುಗಳಿಗೆ ಸರ್ಕಾರದ ಪ್ರೋತ್ಸಾಹದ ಕೊರತೆಯ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.
23 ವರ್ಷ ಕರ್ನಾಟಕಕ್ಕಾಗಿ ಓಡಿದ ಪೂವಮ್ಮಗೆ ಸಿಗದ ಒಂದು ಕರೆ! ಚಿನ್ನ ಗೆದ್ದರೂ ಸರ್ಕಾರದಿಂದ ನಿರ್ಲಕ್ಷ್ಯ?
Savistara
Bureau Report
[t4b-ticker]









































