ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್‌ ಶಾಸಕ ರಾಜೇಗೌಡ ಮತ್ತೆ ನಿರಾಳ

Picture of Savistara

Savistara

Bureau Report

ನವದೆಹಲಿ: ಶೃಂಗೇರಿ ಶಾಸಕರನ್ನಾಗಿ ಕಾಂಗ್ರೆಸ್‌ನಟಿ.ಡಿ.ರಾಜೇಗೌಡ ಅವರನ್ನು ಮರುಸ್ಥಾಪಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದುವರಿಸಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.

ರಾಜೇಗೌಡ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.ಇದೇ ವೇಳೆ ಹೆಚ್ಚುವರಿ ದಾಖಲೆ ಸಲ್ಲಿಕೆಗೆ ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ಗೆ ಅವಕಾಶ ನೀಡಿದೆ. ಮುಂದಿನ ವಿಚಾರಣೆವರೆಗೂ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.ಶಾಸಕರಾಗಿ ಟಿ.ಡಿ. ರಾಜೇಗೌಡ ಮುಂದುವರಿಯಲಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ಅವರನ್ನು 201 ಮತಗಳಿಂದ ಸೋಲಿಸಿದ್ದರು. 1,811 ಅಂಚೆ ಮತಗಳು ಚಲಾವಣೆಯಾಗಿದ್ದವು.ಜೀವರಾಜ್‌ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ, ‘1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಭಾರತ ಚುನಾವಣಾ ಆಯೋಗ ಹೊರಡಿಸಿದ ಚುನಾವಣಾ ಅಧಿಕಾರಿಯ ಕೈಪಿಡಿಯ ನಿಬಂಧನೆಗಳ ಪ್ರಕಾರ, ಪ್ರತಿವಾದಿ ವಿಜೇತ ಅಭ್ಯರ್ಥಿಯು ಚುನಾವಣೆಯಲ್ಲಿ ಎಸಗಿರುವ ದುಷ್ಕೃತ್ಯಗಳು, ಅಪರಾಧಗಳು, ಅನೈತಿಕ ಕೃತ್ಯಗಳು ಮತ್ತು ಲೋಪಗಳ ಆರೋಪಗಳನ್ನು ಪರಿಗಣಿಸಬೇಕು. ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳನ್ನು ಕಾನೂನಿನ ಪ್ರಕಾರ ಮರು ಎಣಿಕೆ ಮಾಡಲು ಆದೇಶಿಸಿಫಲಿತಾಂಶಗಳನ್ನು ಹೊಸದಾಗಿ ಘೋಷಿಸಲು ಆದೇಶಿಸಬೇಕು’ ಎಂದು ಕೋರಿದ್ದರು. ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು.

ಇತ್ತೀಚೆಗೆ ಅಂಚೆ ಮತಗಳ ಮರು ಮತ ಎಣಿಕೆ ನಡೆಸಲಾಗಿತ್ತು.2023ರಲ್ಲಿ ಸಿಂಧುವಾಗಿದ್ದ 1,540 ಮತಗಳಲ್ಲಿ 255 ಮತಗಳು ಮರು ಎಣಿಕೆ ವೇಳೆ ಅಸಿಂಧುವಾಗಿದ್ದರಿಂದ ರಾಜೇಗೌಡ ಅವರ ಶಾಸಕ ಸ್ಥಾನಕ್ಕೆ ಕುತ್ತು ಉಂಟಾಗಿತ್ತು. 52 ಮತಗಳ ಮುನ್ನಡೆ ಸಾಧಿಸಿದ್ದ ಜೀವರಾಜ್ ಅವರನ್ನು ಚುನಾಯಿತ ಎಂದು ಘೋಷಿಸಲಾಗಿತ್ತು.

[t4b-ticker]
error: Content is protected !!