ಪಂಜ: ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಭಕ್ತರ ಅನುಮಾನಕ್ಕೆ ಪುಷ್ಟಿ |ಶ್ರೀ ದೇವರ ಶಾಶ್ವತ ಪೂಜೆ ಮತ್ತು ಅನ್ನದಾನ ಸೇವೆ ನಿಧಿ ಇತರ ವಿಚಾರಕ್ಕೆ ಬಳಕೆ ಆರೋಪ

Picture of Savistara

Savistara

Bureau Report

ಪಂಜ :ಪರಿವಾರ ಪಂಚಲಿಂಗೇಶ್ವರ​ ದೇವಸ್ಥಾನದಲ್ಲಿ ಶಾಶ್ವತ ಠೇವಣಿ ವ್ಯವಸ್ಥೆ ಕಳೆದ ಸುಮಾರು 35 ವರ್ಷಗಳಿಂದ ರಾಜ್ಯದಾದ್ಯಂತ ಇರುವ ಭಕ್ತಾದಿಗಳು ಶ್ರೀದೇವರ ಶಾಶ್ವತ ಪೂಜೆ ಮತ್ತು ಅನ್ನದಾನ ಸೇವೆಗಾಗಿ ನಿಧಿಯನ್ನು ಸಂಗ್ರಹಿಸಿ ಸ್ಥಳೀಯ ಸಿಂಡಿಕೇಟ್ ಬ್ಯಾಂಕ್ (ಈಗಿನ ಕೆನರಾ ಬ್ಯಾಂಕ್) ಶಾಖೆಯಲ್ಲಿ ಠೇವಣಿ ಇರಿಸಿದ್ದರು​ ಸೇವಾಕರ್ತರು ಅಪೇಕ್ಷಿಸಿದ ದಿನದಂದು ಈ ಠೇವಣಿಯ ಬಡ್ಡಿಯನ್ನು ಮಾತ್ರ ಪೂಜಾ ಕಾರ್ಯಕ್ಕೆ ಬಳಸಿ, ಪ್ರಸಾದವನ್ನು ಅಂಚೆ ಮೂಲಕ ಭಕ್ತರಿಗೆ ತಲುಪಿಸಲಾಗುತ್ತಿತ್ತು. ಅಲ್ಲದೆ, ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ನಿಯಮಿತವಾಗಿ ಕಳುಹಿಸಲಾಗುತ್ತಿತ್ತು.​ ಈ ಠೇವಣಿಗಳನ್ನು ಯಾವುದೇ ಕಾರಣಕ್ಕೂ ಕ್ಲೋಸ್ ಮಾಡಬಾರದು ಮತ್ತು ಬಡ್ಡಿಯನ್ನು ಮಾತ್ರ ದೇವಸ್ಥಾನದ ಚಾಲ್ತಿ ಖಾತೆಗೆ ಜಮಾ ಮಾಡಬೇಕೆಂದು ಸೂಚಿಸಿ, ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರರಾಗಿದ್ದ ಚಿದ್ಗಲ್ ಪುಟ್ಟಣ್ಣಗೌಡರು ಬ್ಯಾಂಕಿಗೆ ಪತ್ರ ನೀಡಿದ್ದರು.​ಇತ್ತೀಚಿನ ದಿನಗಳಲ್ಲಿ ಭಕ್ತರಿಗೆ ಪ್ರಸಾದ ಅಥವಾ ಆಮಂತ್ರಣ ತಲುಪುತ್ತಿಲ್ಲ. ಈ ಕುರಿತು ವಿಚಾರಿಸಿದಾಗ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಅನುಮತಿ ಪಡೆಯದೇ ಆಡಳಿತಾಧಿಕಾರಿಗಳು ಬ್ಯಾಂಕಿನಲ್ಲಿದ್ದ ಶಾಶ್ವತ ನಿತ್ಯಪೂಜಾ ಠೇವಣಿ ಹಣವನ್ನು ಹಿಂಪಡೆದು ದುರ್ಬಳಕೆ ಮಾಡಿದ್ದಾರೆ ಎಂಬ ಸಂಶಯಾಸ್ಪದ ಸಂಗತಿಗಳು ಹೊರಬಿದ್ದಿವೆ.​ಸೇವಾಕರ್ತರು ನಿರ್ದಿಷ್ಟ ಧಾರ್ಮಿಕ ಉದ್ದೇಶಕ್ಕಾಗಿ ನೀಡಿರುವ ಹಣವನ್ನು, ಧಾರ್ಮಿಕ ದತ್ತಿ ಇಲಾಖೆ ಹಾಗೂ ಭಕ್ತರ ಅನುಮತಿಯಿಲ್ಲದೆ ಹಿಂಪಡೆದಿರುವುದು ಕಾನೂನುಬಾಹಿರ ಮತ್ತು ಅನೈತಿಕ ನಡವಳಿಕೆಯಾಗಿದೆ.​”ದೇವಸ್ಥಾನದ ಆಡಳಿತ ಸಮಿತಿಗೆ ನಿತ್ಯಪೂಜೆ ನಡೆಸಿ ಪ್ರಸಾದ ತಲುಪಿಸುವ ಹಳೆಯ ವ್ಯವಸ್ಥೆಯನ್ನು ಮುಂದುವರಿಸಲು ಸಾಧ್ಯವಾಗದಿದ್ದರೆ, ಭಕ್ತರು ನೀಡಿದ ಹಣವನ್ನು ಅವರಿಗೆ ಮರಳಿಸುವುದು ಅವರ ಕರ್ತವ್ಯ. ಇಂತಹ ಅಕ್ರಮಗಳಿಂದ ಭಕ್ತರು ದೇವಸ್ಥಾನಗಳಿಗೆ ಕಾಣಿಕೆ ನೀಡಲು ಹಿಂಜರಿಯುವಂತಾಗಿದೆ,” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.​ಪಂಜ ಮತ್ತು ಸುಳ್ಯ ಪರಿಸರದ ಸಾರ್ವಜನಿಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಉನ್ನತಾಧಿಕಾರಿಗಳು ಈ ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ನಿತ್ಯಪೂಜಾ ನಿಧಿಯ ಲೆಕ್ಕಪತ್ರಗಳ ಸಮಗ್ರ ತನಿಖೆ ನಡೆಸಿ ಕ್ಷೇತ್ರಾಧಿಪತಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸಬೇಕೆಂದು ಪಂಜ ಸೀಮೆಯ ನಾಗರಿಕರು ಒತ್ತಾಯಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!