ಅ. 23ಕ್ಕೆ ಚುನಾವಣೆ, ಕಾಂಗ್ರೆಸ್ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪಟ್ಟಿ ಫೈನಲ್

Picture of Savistara

Savistara

Bureau Report

ಬೆಂಗಳೂರು : ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರರ ತಲಾ ಎರಡು ಕ್ಷೇತ್ರಗಳಿಗೆ, ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ ಆರನೇ ತಾರೀಕು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅಕ್ಟೋಬರ್ ಒಂಬತ್ತಕ್ಕೆ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದು, ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 27ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ವಿಧಾನ ಪರಿಷತ್ ಚುನಾವಣೆಯನ್ನು ಯಾವುದೇ ಗೊಂದಲವಿಲ್ಲದೇ ಎದುರಿಸಲು ಬಿಜೆಪಿ – ಜೆಡಿಎಸ್ ಸಮನ್ವಯ ಸಮಿತಿ ಸಭೆ ಈಗಾಗಲೇ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದೆ. ನಾಲ್ಕರ ಪೈಕಿ ಮೂರರಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಇನ್ನೊಂದು ಕಡೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯ ಹೆಸರನ್ನೂ ಅಂತಿಮಗೊಳಿಸಿದೆ.

ನವೆಂಬರ್ ಹನ್ನೊಂದರಂದು ನಾಲ್ಕು ಕ್ಷೇತ್ರದ ಶಾಸಕರ ಅಧಿಕಾರಾವಧಿ ಪೂರ್ಣ

ನವೆಂಬರ್ 11 ರಂದು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಶಾಸಕ ಚಿದಾನಂದ ಎಂ ಗೌಡ, ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಶಾಸಕ ಎಸ್.ವಿ. ಸಂಕನೂರ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಶಾಸಕ ಶಶೀಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಶಾಸಕ ಪುಟ್ಟಣ್ಣ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿದ್ದು, ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ.

ಬಿಜೆಪಿ – ಜೆಡಿಎಸ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು?ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಶಿಕ್ಷಕರು ಮತ್ತು ಪದವೀಧರರ ಜೊತೆ ಸಣ್ಣಸಣ್ಣ ಸಭೆಯನ್ನು ನಡೆಸುವುದು. ಕೋರ್ಟ್, ಎಲ್ಐಸಿ, ಶಿಕ್ಷಣ ಸಂಸ್ಥೆಗಳಿಗೆ ತೆರಳುವುದು, ಬೆಂಗಳೂರು ನಗರ ಕ್ಷೇತ್ರ ಬಿಜೆಪಿಯಿಂದ ಕೈತಪ್ಪಿದ್ದು, ಎರಡು ಪಾರ್ಟಿಗಳು ಒಟ್ಟಾಗಿ ಯೋಜನೆ ರೂಪಿಸಿ, ಕ್ಷೇತ್ರವನ್ನು ಮತ್ತೆ ಗೆಲ್ಲಬೇಕು.. ಈ ರೀತಿಯ ನಿರ್ಧಾರವನ್ನು ಬಿಜೆಪಿ – ಜೆಡಿಎಸ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

[t4b-ticker]
error: Content is protected !!