ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಯೋಜನೆಗೆ ಚಾಲನೆ ನೀಡಿದ ತಮಿಳುನಾಡು CM ವಿಜಯ್

Picture of Savistara

Savistara

Bureau Report

ಮದುರೈ (ಪಿಟಿಐ): ನವಜಾತ ಶಿಶುಗಳಿಗೆ 22 ಕ್ಯಾರೆಟ್‌ನ ಒಂದುಗ್ರಾಂ ಚಿನ್ನದ ಉಂಗುರ ನೀಡುವ ಸರ್ಕಾರದ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್‌ ಅವರು ಸೋಮವಾರ ಚಾಲನೆ ನೀಡಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಲ್ಪ ಹೊತ್ತು ಮಗುವನ್ನು ಎತ್ತಿಕೊಂಡ ಅವರು, ಅದಕ್ಕೆ ಉಂಗುರವನ್ನು ಉಡುಗೊರೆಯಾಗಿ ನೀಡಿದರು. ಆ ಮೂಲಕ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯನ್ನು ಈಡೇರಿಸಿದ್ದಾರೆ.ತಾಯ್ತನವನ್ನು ಗೌರವಿಸುವ, ಮಹಿಳೆಯರ ಆರೋಗ್ಯವನ್ನು ಉತ್ತೇಜಿಸುವ ಮತ್ತು ಹೆಚ್ಚಿನ ಕುಟುಂಬಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಒಳಗೊಳ್ಳುವಂತೆ ಮಾಡಿ, ಸರ್ಕಾರಿ ಆಸ್ಪತ್ರೆಗಳಲ್ಲೇ ಮಕ್ಕಳ ಜನನ ಆಗುವಂತೆ ಮಾಡುವ ಉದ್ದೇಶದ ಈ ಯೋಜನೆಗಾಗಿ ಸರ್ಕಾರವು ₹755.83 ಕೋಟಿ ಮೀಸಲಿರಿಸಿದೆ.ಆರಂಭಿಕ ಹಂತದಲ್ಲಿ 1.28 ಲಕ್ಷ ಚಿನ್ನದ ಉಂಗುರವನ್ನು ಸಿದ್ಧಪಡಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಜನ್ಮಪಡೆಯುವ ಮಕ್ಕಳಿಗೆ ನೀಡಲಾಗುತ್ತದೆ. ವಾರ್ಷಿಕವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 4,41,667 ಮಕ್ಕಳ ಜನನವಾಗುತ್ತದೆ ಎಂದು ಅಂದಾಜಿಸಲಾಗಿದೆ.

22 ಕ್ಯಾರೆಟ್

ಯೋಜನೆಯು ಜೂನ್ 22ರಿಂದಲೇ (ವಿಜಯ್ ಅವರ ಜನ್ಮದಿನ) ಪೂರ್ವಾನ್ವಯವಾಗಲಿದೆ.

[t4b-ticker]
error: Content is protected !!