ದಸರಾ ಹಬ್ಬಕ್ಕೆ ಈಗಾಗಲೇ ಸರ್ಕಾರ ರಜೆ ಘೋಷಿಸಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕಡ್ಡಾಯ ಪಾಲನೆ ಮಾಡಬೇಕು. ಆದರೆ ದಸರಾ ರಜೆಯನ್ನು ಸರ್ಕಾರದ ಅನುದಾನ ಪಡೆಯುವ ಕ್ರಿಶ್ಚಿಯನ್ ಕಾನ್ವೆಂಟ್ ಸ್ಕೂಲ್ ಗಳು ಪಾಲಿಸುತ್ತಿಲ್ಲ. ಅಂತಹ ಶಾಲೆಗಳ ಎದುರಲ್ಲಿ ಈ ಬಾರಿ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳೂರು, ಸೆ.28: ದಸರಾ ಹಬ್ಬಕ್ಕೆ ಈಗಾಗಲೇ ಸರ್ಕಾರರಜೆ ಘೋಷಿಸಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಕಡ್ಡಾಯ ಪಾಲನೆ ಮಾಡಬೇಕು. ಆದರೆ ದಸರಾ ರಜೆಯನ್ನು ಸರ್ಕಾರದ ಅನುದಾನ ಪಡೆಯುವ ಕ್ರಿಶ್ಚಿಯನ್ ಕಾನ್ವೆಂಟ್ ಸ್ಕೂಲ್ ಗಳು ಪಾಲಿಸುತ್ತಿಲ್ಲ. ಅಂತಹ ಶಾಲೆಗಳ ಎದುರಲ್ಲಿ ಈ ಬಾರಿ ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಹಿಂದುಗಳ ದಸರಾ ಹಬ್ಬಕ್ಕಾಗಿ ಒಂದು ತಿಂಗಳ ಸರ್ಕಾರಿ ರಜೆ ಇದೆ, ಆದರೆ ಇದೇ ದಸರಾ ಸಂದರ್ಭದಲ್ಲಿ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳಲ್ಲಿ ಪರೀಕ್ಷೆ ಪಾಠ ಪ್ರವಚನ ಮಾಡಿಸುತ್ತಾರೆ. ಅವಧಿಗೆ ನೀಡಲಾಗುವ ರಜೆಯನ್ನು ಕ್ರಿಸ್ಮಸ್ ವೇಳೆಗೆ ಕೊಡುತ್ತಾರೆ.
ಇದರಿಂದ ಅಲ್ಲಿ ಕಲಿಯುವ ಶಾಲಾ ಮಕ್ಕಳಿಗೆ, ಅಲ್ಲಿ ಕೆಲಸ ಮಾಡುವ ಸಿಬಂದಿಗೆ ಹಬ್ಬ ಆಚರಿಸಲು ಅಥವಾ ದಸರಾಕ್ಕೆ ಹೊರಗೆ ಹೋಗಲು ಆಗುತ್ತಿಲ್ಲ. ಇದರ ಬಗ್ಗೆ ಹಲವು ಪೋಷಕರು ನಮ್ಮಲ್ಲಿ ನೋವು ಹೇಳಿಕೊಂಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.ಎಲ್ಲ ಕ್ರಿಶ್ಚಿಯನ್ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು 99 ಪರ್ಸೆಂಟ್ ಹಿಂದುಗಳೇ ಇದ್ದಾರೆ. ಆದರೆ ದಸರಾ ಸಂದರ್ಭದಲ್ಲಿ ಈ ಶಾಲೆಗಳಲ್ಲಿ ಪರೀಕ್ಷೆ ಇಟ್ಟರೆ ಹಬ್ಬ ಆಚರಣೆ ಮಾಡಕ್ಕಾಗಲ್ಲ. ಇದರಿಂದ ಆ ಮಕ್ಕಳಿಗೆ ದ್ರೋಹ ಬಗೆದಂತೆ. ಈ ಬಾರಿಯೂ ಇದೇ ನೀತಿ ಮುಂದುವರಿದರೆ ಶಾಲೆಗಳ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಮುತಾಲಿಕ್ ಹೇಳಿದರು.
ಡಿ.25ರ ಒಂದು ದಿನ ರಜೆ ಇರುವುದನ್ನು ಕ್ರಿಸ್ತಿಯನ್ ಶಾಲೆಗಳು ಹತ್ತು ದಿನ ರಜೆ ಕೊಟ್ಟು ಸಾಂಸ್ಕೃತಿಕ ಮತಾಂತರ ಮಾಡುವ ಯತ್ನ ಮಾಡುತ್ತಿದ್ದಾರೆ. ಸರ್ಕಾರದ ಅನುದಾನ ಪಡೆಯುವ ಶಾಲೆಗಳು ಸರ್ಕಾರದ ನೀತಿಯನ್ನು ಕಡ್ಡಾಯ ಪಾಲಿಸಬೇಕು ಎಂದರು. ಅಲ್ಲಿ ಮೊದಲೇ ರಜೆ ಮತ್ತು ಇತರ ನೀತಿಗಳ ಬಗ್ಗೆ ಗೊತ್ತಿರುತ್ತದೆ, ವಿರೋಧ ಇರೋರು ಯಾಕೆ ಮಕ್ಕಳನ್ನು ಕಳಿಸಬೇಕು ಎಂದು ಕೇಳಿದ ಪ್ರಶ್ನೆಗೆ, ನಾವು ಹಿಂದು ವಿರೋಧಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಅಭಿಯಾನ ಮಾಡುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಪ್ರತ್ಯೇಕ ಇರುವುದಿಲ್ಲ. ನಾವು ಸಂಘಟನೆಯ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದರ ಬಗ್ಗೆ ಪ್ರಸಾದ್ ಅತ್ತಾವರ ಜೊತೆಗೆ ಮಾತುಕತೆ ಮಾಡಿದ್ದೇವೆ. ಅನಾರೋಗ್ಯದಲ್ಲಿರುವ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.
















































