ಸುಳ್ಯ: ಸಂಸದ ಕ್ಯಾ. ಚೌಟರಿಂದ ಅಧಿಕಾರಿಗಳಿಗೆ ಖಡಕ್ ಸೂಚನೆ |ಅಮೃತ್ 2 ಯೋಜನೆಯಿಂದ ಹದೆಗೆಟ್ಟ ಮುಖ್ಯ ರಸ್ತೆಗೆ ಡಾಮರೀಕರಣ ಪ್ರಾರಂಭ

Picture of Savistara

Savistara

Bureau Report

ಸುಳ್ಯ:ಅಮೃತ್ 2.0 ಯೋಜನೆಯ ಕಾಮಗಾರಿಯಿಂದ ಹದಗೆಟ್ಟಿದ್ದ ಸುಳ್ಯ ನಗರದ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ ಪ್ರಾರಂಭಿಸಿದ್ದಾರೆ.ಸುಳ್ಯ ನಗರ ವ್ಯಾಪ್ತಿಯ ಹಳೇಗೇಟು, ಜ್ಯೋತಿ ಸರ್ಕಲ್ ಮತ್ತು ಗಾಂಧಿನಗರ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದು ಸಾರ್ವಜನಿಕರು, ವಾಹನ ಸವಾರರು ಪರದಾಡುತ್ತಿದ್ದರು. ಈ ಹಿಂದೆ ಒಂದು ಬಾರಿ ತಾತ್ಕಾಲಿಕವಾಗಿ ದುರಸ್ತಿ ನಡೆಸಿದ್ದರೂ ಮಳೆಯ ಕಾರಣದಿಂದ ಕಾಂಕ್ರೀಟ್ ಕಿತ್ತು ಹೋಗಿತ್ತು.

ಇದೀಗ ಮತ್ತೆ ಹೊಂಡ ಮುಚ್ಚಿ ಡಾಮರೀಕರಣ ನಡೆಸಿ ದುರಸ್ತಿ ಕಾರ್ಯ ನಡೆಸಲಾಗಿದೆ. ಮೊನ್ನೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಅವರ ಗಮನಕ್ಕೆ ತರಲಾಗಿತ್ತು. ತಕ್ಷಣವೇ ರಸ್ತೆ ದುರಸ್ತಿಪಡಿಸುವಂತೆ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.ಸಂಸದರ ಸೂಚನೆಯ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತು ದುರಸ್ತಿ ಕಾರ್ಯ ಆರಂಭಿಸಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

[t4b-ticker]
error: Content is protected !!