ಸೌಜನ್ಯ ಪ್ರಕರಣದ ಮರು ತನಿಖೆ: 16 ಮಂದಿ ಎಸ್‌ಐಟಿ ಸಹಾಯಕ ಅಧಿಕಾರಿಗಳ ನೇಮಕ

Picture of Savistara

Savistara

Bureau Report

ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿ ಕು.ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶ ಮಾಡಿದ ಬಳಿಕ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖಾ ದಳದ ಮುಖಸ್ಥರಾಗಿ ಎನ್‌.ಶಶಿಕುಮಾರ್‌ ಐಪಿಎಸ್‌, ಪೊಲೀಸ್‌ ಮಹಾನಿರೀಕ್ಷಕರು ಹಾಗೂ ಸದಸ್ಯರುಗಳಾದ ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತ ವಾರ್ತೆ ಶ್ರೀಮತಿ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕರಾದ ಲೋಕೇಶ್ ಜಗಲಸಾ‌ರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವೆಂಕಟೇಶ್ ಪ್ರಸನ್ನ ಅವರನ್ನು ಒಳಗೊಂಡ ಐದು ಮಂದಿಯ ಅಧಿಕಾರಿಗಳ ತಂಡವನ್ನು ಸೆ.24 ರಂದು ಸರಕಾರ ರಚನೆ ಮಾಡಿತ್ತು. ಇದೀಗ ತನಿಖಾ ತಂಡದ ಸಹಾಯಕರಾಗಿ 16 ಮಂದಿಯನ್ನು ನೇಮಕ ಮಾಡಿ ಡಿಜಿ&ಐಜಿಪಿ ಡಾ.ಎಂ.ಎ.ಸಲೀಂ ಅವರು ಸೆ.29 ರಂದು ಆದೇಶ ಮಾಡಿದ್ದಾರೆ.

ಎಸ್‌ಐಟಿ ತನಿಖಾ ಸಹಾಯಕರಾಗಿ ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ.ಬಿ, ಸಿಐಡಿ ಇನ್ಸ್‌ಪೆಕ್ಟ‌ರ್ ದೀಪಕ್‌, ಇನ್ಸ್‌ಪೆಕ್ಟ‌ರ್ ಮೋಹನ್‌ ಡಿ ಪಾಟೀಲ್, ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೋಣಾಜೆ ಪೊಲೀಸ್‌ ಠಾಣೆಯ ಪಿಎಸ್‌ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರದೀಪ್, ಕಂಕನಾಡಿ ಪೊಲೀಸ್ ಠಾಣೆಯ ಮ.ಪಿಎಸ್‌ಐ ಅನಿತಾ ನಿಕಂ, ಮಂಗಳೂರು ಸಿಸಿಬಿ ಎಎಸ್‌ಐ ಮೋಹನ್‌, ಕಂಕನಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಕುಮಾರ್ ರೈ, ಗೋವರ್ಧನ್, ದಿನೇಶ್.ಎನ್, ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ರಾಧಕೃಷ್ಣ.ಕೆ.ಕೆ, ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿ ರೆಜಿ.ವಿ.ಎಂ, ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ರಾಜೇಂದ್ರ ಪ್ರಸಾದ್.ವಿ.ಪಿ, ಕಂಕನಾಡಿ ಪೊಲೀಸ್‌ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿದೆ.

ನೇಮಕ ಮಾಡಿದ ತನಿಖಾ ಸಹಾಯಕರು ತಕ್ಷಣ ತಮ್ಮ ಠಾಣೆಗಳಿಂದ ಬಿಡುಗಡೆಗೊಂಡು ಎಸ್‌ಐಟಿ ತನಿಖಾ ತಂಡ ಬೆಂಗಳೂರಿನಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

[t4b-ticker]
error: Content is protected !!