ಬೆಳ್ತಂಗಡಿ ತಾಲೂಕಿನ 9 ಗ್ರಾಮಗಳಲ್ಲಿ ₹5.85 ಕೋಟಿ ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಶಿಲಾನ್ಯಾಸ

Picture of Savistara

Savistara

Bureau Report

ಬೆಳ್ತಂಗಡಿ: ತಾಲೂಕಿನ 9 ಗ್ರಾಮಗಳಲ್ಲಿ ತಲಾ ₹65 ಲಕ್ಷದಂತೆ ಒಟ್ಟು ₹5.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡಗಳ ಶಿಲಾನ್ಯಾಸವನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ನೆರವೇರಿಸಿದರು, ಶಾಸಕ ಹರೀಶ್ ಪೂಂಜಾ ಉಪಸ್ಥಿತರಿದ್ದರು.

ಕಳೆಂಜ, ಕಿಲ್ಲೂರು-ಮಿತ್ತಬಾಗಿಲು, ಇಂದಬೆಟ್ಟು, ನಡ, ಕಾಶಿಬೆಟ್ಟು-ಲಾಯಿಲ, ಮಲೆಬೆಟ್ಟು-ಕೊಯ್ಯೂರು, ಇಳಂತಿಲ, ತೆಕ್ಕಾರು ಮತ್ತು ನ್ಯಾಯತರ್ಪು ಗ್ರಾಮಗಳಲ್ಲಿ ಈ ಕೇಂದ್ರಗಳು ತಲೆ ಎತ್ತಲಿವೆ.

ಗ್ರಾಮೀಣ ಜನರಿಗೆ ತಮ್ಮದೇ ಊರಿನಲ್ಲಿ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ದೊರೆಯುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಗ್ರಾಮೀಣ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆ.ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

[t4b-ticker]
error: Content is protected !!