ನವೆಂಬರ್ 1ರಿಂದ ಕರೆ ಮಾಡುವವರ ಅಧಿಕೃತ ಹೆಸರು ಕಡ್ಡಾಯ

Picture of Savistara

Savistara

Bureau Report

ನ.1ರಿಂದ ಮೊಬೈಲ್‌ ಕರೆ ಸ್ವೀಕರಿಸುವವರಿಗೆ ಕರೆ ಮಾಡುವವರ ಅಧಿಕೃತ ಹೆಸರು ಕಾಣಿಸಲಿದೆ. ಸ್ಪ್ಯಾಮ್, ವಂಚನೆ ಕರೆಗಳಿಗೆ ಕಡಿವಾಣ ಹಾಕಲು ದೂರಸಂಪರ್ಕ ಇಲಾಖೆ ಸಿಎನ್‌ಪಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಮೊಬೈಲ್‌ನಲ್ಲಿ ನಂಬ‌ರ್ ಸೇವ್ ಆಗಿಲ್ಲದಿದ್ದರೆ, ಸಿಮ್ ನೋಂದಣಿ ವೇಳೆ ನೀಡಿದ ಅಧಿಕೃತ ಹೆಸರು ಪ್ರದರ್ಶನವಾಗಲಿದೆ. ಈ ವ್ಯವಸ್ಥೆ ಸದ್ಯ 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳಲ್ಲಿ ಜಾರಿಯಾಗಲಿದ್ದು, ಅಂತಾರಾಷ್ಟ್ರೀಯ ಕರೆಗಳಿಗೆ ‘ಇಂಟರ್‌ನ್ಯಾಷನಲ್ ಕಾಲ್’ ಎಂದು ಕಾಣಿಸಲಿದೆ. ವ್ಯಾಪಾರಿಗಳಿಗೆ ನೋಂದಾಯಿತ ವ್ಯವಹಾರದ ಹೆಸರನ್ನು ಪ್ರದರ್ಶಿಸುವ ಅವಕಾಶವೂ ಇದೆ.

[t4b-ticker]
error: Content is protected !!