ಸುಳ್ಯದ ಲ್ಯಾಂಪ್ಸ್ ಸೊಸೈಟಿ ಚುನಾವಣೆ : ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ನೀಲಮ್ಮ ಉಪಾಧ್ಯಕ್ಷರಾಗಿ ಪುಂಡರೀಕ ಆಯ್ಕೆ:

Picture of Savistara

Savistara

Bureau Report

ಸುಳ್ಯ: ತೀವ್ರ ಕುತೂಹಲ ಕೆರಳಿಸಿದ್ದ ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ನಿಯಮಿತ (ಲ್ಯಾಂಪ್ಸ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೀಲಮ್ಮ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಂಡರೀಕ ಕಾಪುಮಲೆ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ

ವಿಜೇತರಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನೀಲಮ್ಮ ಕೆ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಧವ ಸ್ಪರ್ಧಿಸಿದ್ದರು.ಚುನಾವಣೆ ನಡೆದು 13 ಮತಗಳಲ್ಲಿ ನೀಲಮ್ಮ ಅವರು 7 ಮತ ಪಡೆದು ವಿಜಯಿಯಾದರೆ ಮಾಧವ 6 ಮತಗಳು ಪಡೆದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪುಂಡರೀಕ ಕೆ.ಆರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮನಿರ್ದೇಶಿತ ಸದಸ್ಯ ಭವಾನಿಶಂಕರ ಕಲ್ಮಡ್ಕ ಸ್ಪರ್ಧಿಸಿದ್ದರು. ಪುಂಡಲೀಕ 7 ಮತ ಪಡೆದು ವಿಜಯಿಯಾದರೆ ಭವಾನಿ ಶಂಕರ ಕಲ್ಮಡ್ಕ 6 ಮತ ಪಡೆದರು. ಪರಿಶಿಷ್ಟ ವರ್ಗಗಳ ಸಹಕಾರಿ ಮಹಾಮಂಡಲದ ನಿರ್ದೇಶಕರಾದ ಮಂಜುನಾಥ್, ಸುಳ್ಯ ವಲಯ ಅರಣ್ಯಾಧಿಕಾರಿ ಎನ್‌.ಮಂಜುನಾಥ್, ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು. ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಎಂ.ರಘು ಚುನಾವಣಾಧಿಕಾರಿಯಾಗಿದ್ದರು.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!