ಮಂಗಳೂರು : ಮಳೆಯಾರ್ಭಟಕ್ಕೆ ಲ್ಯಾಂಡ್‌ ಆಗಬೇಕಿದ್ದ ವಿಮಾನಗಳು ಡೈವರ್ಟ್‌

Picture of Savistara

Savistara

Bureau Report

ಮಂಗಳೂರು : ಕೆಲ ದಿನಗಳಿಂದ ಮಂಗಳುರಿನಲ್ಲಿ ರಣ ಬಿಸಿಲಿನ ವಾತವರಣವಿತ್ತು. ಮಳೆಗಾಗಿ ಕರಾವಳಿಗರು ಪ್ರಾರ್ಥಿಸುತ್ತಿದ್ದರು. ಈ ನಡೆವೆ, ನಗರದ ಹಲವೆಡೆ ನಿನ್ನೆ (ಮಾ12) ರಾತ್ರಿ ಏಕಾಏಕಿ ಮಳೆಯಾಗಿದೆ. ಇದರಿಂದಾಗಿ ಬೆಂದಿದ್ದ ಧರೆಯು ಹಾಗೆಯೇ ತಂಪಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯ ಅಬ್ಬರ ಜೋರಾಗಿಯೇ ಇತ್ತು. ಮಂಗಳೂರಿನ ಬಜಪೆ ವಲಯಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ. ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು.

ಅಷ್ಟುಮಾತ್ರವಲ್ಲದೆ, ಹಲವೆಡೆ ಮರ ಬಿದ್ದಂತೆ ಅನೇಕ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದ್ದಾನೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

[t4b-ticker]
error: Content is protected !!