ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 13ರ ರಾತ್ರಿ ಹಾಗೂ 14ರ ಬೆಳಗಿನ ಜಾವ ಘಟಿಸಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೈದರಾಬಾದ್(ತೆಲಂಗಾಣ): ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 13 ಮತ್ತು 14ರ ಹೋಳಿ ಹಬ್ಬದಂದು ಸಂಭವಿಸಲಿದೆ. ಈ ಖಗೋಳ ವಿದ್ಯಮಾನವನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಚಂದ್ರ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದ್ದಾನೆ.ಬ್ಲಡ್ ಮೂನ್ ಮತ್ತು ಅದರ ವಿವಿಧ ಹಂತಗಳು: ಬ್ಲಡ್ ಮೂನ್ ಎಂಬುದು ಸಂಪೂರ್ಣ ಚಂದ್ರಗ್ರಹಣದ ಭಾಗವಾಗಿದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಸಂಭವಿಸುವುದೇ ಈ ಪೂರ್ಣ ಚಂದ್ರಗ್ರಹಣ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುತ್ತದೆ. ಪರಿಣಾಮವಾಗಿ, ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ.ಆದರೂ ಸೂರ್ಯನ ಸ್ಪಲ್ಪ ಪ್ರಮಾಣದ ಬೆಳಕು ಚಂದ್ರನನ್ನು ತಲುಪುತ್ತದೆ ಮತ್ತು ಭೂಮಿಯ ವಾತಾವರಣದ ಮೂಲಕ ಫಿಲ್ಟರ್ ಆಗುತ್ತದೆ. ಹೀಗೆ ಫಿಲ್ಟರ್ ಆದ ಸೂರ್ಯನ ಬೆಳಕು ವಾತಾವರಣದ ಮೂಲಕ ಹಾದುಹೋಗುತ್ತದೆ. ಇದು ಕಡಿಮೆ ತರಂಗಾಂತರದ ನೀಲಿ ಬೆಳಕಿನ ಚದುರುವಿಕೆಗೆ ಕಾರಣವಾಗುತ್ತದೆ. ಆದರೆ ಉದ್ದವಾದ ತರಂಗಾಂತರಗಳನ್ನು ಹೊಂದಿರುವ ಕೆಂಪು ಮತ್ತು ಕಿತ್ತಳೆ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುತ್ತದೆ. ಇದರಿಂದ ಚಂದ್ರ ಕೆಂಪು ಬಣ್ಣದಲ್ಲಿ ಕಾಣುತ್ತಾನೆ ಇದಕ್ಕೆ ಬ್ಲಡ್ ಮೂನ್ (ರಕ್ತ ಚಂದ್ರ) ಎಂದು ಕರೆಯಲಾಗುತ್ತದೆ.ಸಂಪೂರ್ಣ ಚಂದ್ರಗ್ರಹಣಕ್ಕೆ ವಿವಿಧ ಹಂತಗಳಿವೆ. ಪೆನಂಬ್ರಲ್ ಹಂತದಲ್ಲಿ ಚಂದ್ರನು ಮೊದಲು ಭೂಮಿಯ ಹೊರಗಿನ ನೆರಳಿನಿಂದ ಮಬ್ಬಾಗುತ್ತಾನೆ (ಡಿಮ್) ಆಗುತ್ತಾನೆ. ಈ ನಂತರ ಭಾಗಶಃ ಹಂತ ಬರುತ್ತದೆ, ಈ ಸಮಯದಲ್ಲಿ ಚಂದ್ರನು ಭೂಮಿಯ ಗಾಢವಾದ ಕೇಂದ್ರ ಅಂಬ್ರಾಲ್ ನೆರಳಿನಿಂದ ಆವೃತವಾಗುತ್ತಾನೆ. ಈ ಕೆಳಗೆ ಎಲ್ಲಾ ಹಂತಗಳನ್ನು ಸುಲಭವಾಗಿ ವಿವರಿಸಲಾಗಿದೆ.


ಬ್ಲಡ್ ಮೂನ್: ಯಾವಾಗ ಮತ್ತು ಎಲ್ಲಿ ನೋಡಬಹುದು:
ಸಂಪೂರ್ಣ ಚಂದ್ರಗ್ರಹಣವು ಮಾರ್ಚ್ 13 ಮತ್ತು 14 ರಂದು ಘಟಿಸಲಿದೆ. ಗ್ರಹಣ ಆರು ಗಂಟೆಗಳ ಕಾಲ ಗೋಚರಿಸುತ್ತದೆ. ಆದಾಗ್ಯೂ, ಸಂಪೂರ್ಣ ಚಂದ್ರ ಗ್ರಹಣದ ಹಂತವು 66 ನಿಮಿಷಗಳ ಕಾಲ ಇರುತ್ತದೆ. ಇದರಿಂದ ಖಗೋಳ ವೀಕ್ಷಕರಿಗೆ ಈ ಕೌತುಕ ಕಣ್ತುಂಬಿಕೊಂಡು ಆನಂದಿಸಲು ಸಾಕಷ್ಟು ಸಮಯ ಇರುತ್ತದೆ.ಚಂದ್ರಗ್ರಹಣ ಉತ್ತರ ಮತ್ತು ದಕ್ಷಿಣ ಅಮೆರಿಕ, ಪಶ್ಚಿಮ ಯುರೋಪ್, ಆಫ್ರಿಕಾ ಮತ್ತು ಪೆಸಿಫಿಕ್ ಪ್ರದೇಶದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ.
ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?:
ಭಾರತೀಯ ಖಗೋಳ ವೀಕ್ಷಕರಿಗೆ ಆಕಾಶದಲ್ಲಿ ನಡೆಯುವ ವಿಸ್ಮಯ ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸಂಪೂರ್ಣ ಚಂದ್ರ ಗ್ರಹಣವು ಭಾರತದ ಕಾಲಮಾನದ ಪ್ರಕಾರ ಹಗಲು ಹೊತ್ತಿನಲ್ಲಿ ಸಂಭವಿಸುತ್ತದೆ.
ಸೆಪ್ಟೆಂಬರ್ನಲ್ಲಿ ಮತ್ತೊಂದು ಸಂಪೂರ್ಣ ಚಂದ್ರಗ್ರಹಣ: ಭಾರತೀಯ ಖಗೋಳ ವೀಕ್ಷಕರು ಚಿಂತಿಸಬೇಕಾಗಿಲ್ಲ ಏಕೆಂದರೆ ಈ ವರ್ಷದ ಸೆಪ್ಟೆಂಬರ್ 7 ಮತ್ತು 8 ರಂದು ಮತ್ತೊಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಇದು ಆಫ್ರಿಕಾ, ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾದಾದ್ಯಂತ ಗೋಚರಿಸುತ್ತದೆ. ಎರಡನೇ ಸಂಪೂರ್ಣ ಚಂದ್ರಗ್ರಹಣವು ಅಮೆರಿಕದಲ್ಲಿ ಕಾಣುವುದಿಲ್ಲ.










































