ಕೇರಳ | ನೇರಳಾತೀತ ವಿಕಿರಣಮಟ್ಟ ಏರಿಕೆ: ಪಾಲಕ್ಕಾಡ್‌ನಲ್ಲಿ ರೆಡ್ ಅಲರ್ಟ್

Picture of Savistara

Savistara

Bureau Report

ತಿರುವನಂತಪುರ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸೂರ್ಯನ ಕಿರಣಗಳಿಂದ ಬರುವ ನೇರಳಾತೀತ ವಿಕಿರಣದ ಮಟ್ಟದಲ್ಲಿ ಏರಿಕೆಯಾಗಿರುವ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ 11 ಅಂಶದಷ್ಟು ವಿಕಿರಣಗಳು ಪತ್ತೆಯಾಗಿದೆ. ಇದು ಸುಡುವಿಕೆ, ಚರ್ಮದ ಕಾಯಿಲೆಗಳು, ಕಣ್ಣಿಗೆ ಸಂಬಂಧಿತ ರೋಗಗಳು ಸೇರಿ ಹಲವು ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡಲಿವೆ. ಹೀಗಾಗಿ ನೇರವಾಗಿ ಸೂರ್ಯ ಬಿಸಿಲಿಗೆ ಮೈ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.ವಿಕಿರಣ ಮಟ್ಟ ಪತ್ತೆ ಮಾಡುವ ಸಾಧನವನ್ನು ಪಾಲಕ್ಕಾಡ್‌ನ ಹಲವೆಡೆ ಸ್ಥಾಪಿಸಲಾಗಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಹಾನಿಗೊಳಿಸುವ ವಿಕಿರಣಗಳು ಪತ್ತೆಯಾಗಿವೆ. ಬಿಸಿಲಿನಲ್ಲಿ ಕೆಲಸ ಮಾಡುವವರು, ಮೀನುಗಾರರು, ಬೈಕ್‌ಗಳಲ್ಲಿ ಓಡಾಡುವವರು, ಪ್ರವಾಸಿಗರು ಎಚ್ಚರಿಕೆಯಿಂದಿರಿ. ಅದರಲ್ಲೂ ಕ್ಯಾನ್ಸರ್, ಚರ್ಮದ ಸಮಸ್ಯೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಕಾಳಜಿವಹಿಸಿ ಎಂದು ಸೂಚಿಸಿದೆ.ದೇಹದ ಬಹುಭಾಗ ಮುಚ್ಚುವ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನೇ ಧರಿಸಿ, ಮನೆಯಿಂದ ಹೊರಹೋಗುವಾಗ ಟೋಪಿ, ಛತ್ರಿ, ತಂಪು ಕನ್ನಡಕ ಧರಿಸಿ ಎಂದು ಪ್ರಕಟಣೆಯಲ್ಲಿ ಹೇಳಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!