ಸುಳ್ಯ:ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ನಡೆಸಬೇಕೆಂದು ಸುಳ್ಯ ಬಿಜೆಪಿ ಯ ಜಯನಗರ ಬೂತ್ ಸಮಿತಿ ಯವರು ಕೊರಗಜ್ಜ ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡು ವಿಶೇಷ ಹರಕೆಯ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ ಮೇ 17 ರಂದು ಜಯನಗರದಲ್ಲಿ ನಡೆಯಲಿದೆ.

ಈ ನೇಮದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೇಯೆಂದ್ರ,ಸಂಸದ ಕ್ಯಾ.ಬ್ರಿಜೇಶ್ ಚೌಟ,ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕಿ ಭಾಗೀರಥಿ ಮುರುಳ್ಯ,ಕಿಶೋರ್ ಪುತ್ತೂರು ಮತ್ತು ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.ಈ ವೇಳೆ ಕೊರಗಜ್ಜ ನೇಮದ ಕರಿಗಂಧ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸಲಾಗುವುದೆಂದು ಸಮಿತಿ ಯ ಪ್ರಮುಖರು ಮಾಹಿತಿ ನೀಡಿದ್ದು ಕೊರಗಜ್ಜ ನೇಮ ಹಿನ್ನೆಲೆಯಲ್ಲಿ ಸಮಿತಿ,ಉಪಸಮಿತಿಗಳನ್ನು ರಚಿಸಲಾಗಿದೆ.














































