ಸಮುದ್ರದೊಳಕ್ಕೆ ಬಿದ್ದ ಅಪಾಯಕಾರಿ ಸರಕು: ಕೇರಳದಲ್ಲಿ ಅಲರ್ಟ್ ಘೋಷಣೆ

Picture of Savistara

Savistara

Bureau Report

ತಿರುವನಂತಪುರಂ: ಸರಕು ಹಡಗಿನಲ್ಲಿ ಸಾಗಣೆಯಾಗುತ್ತಿದ್ದ ತೈಲ ಕಂಟೈನರ್ ಗಳು ಅಪಘಾತಕ್ಕೀಡಾಗಿ ಕೇರಳ ಕರಾವಳಿಯ ಸಮುದ್ರದೊಳಕ್ಕೆ ಬಿದ್ದಿದ್ದು ಈ ಘಟನೆಯಿಂದ ಜನರು ಗಾಬರಿಗೊಳಗಾಗಿರುವ ಘಟನೆ ನಡೆದಿದೆ.ಪ್ರಾಥಮಿಕ ವರದಿಗಳ ಪ್ರಕಾರ, ಅರಬ್ಬಿ ಸಮುದ್ರದ ಕೊಚ್ಚಿ ತೀರದ ನೈರುತ್ಯ ದಿಕ್ಕಿನಿಂದ ಸುಮಾರು 38 ನಾಟಿಕಲ್ ಮೈಲಿ ದೂರದಲ್ಲಿ ಈ ಅಪಘಾತ ಸಂಭವಿಸಿದೆ.ವಿಳಿಂಜಮ್ ನಿಂದ ಕೊಚ್ಚಿ ತೀರವನ್ನು ಸಮೀಪಿಸುತ್ತಿದ್ದ ವೇಳೆ ಲಿಬರಿಯನ್ ಫ್ಲಾಗ್ ಕ್ಯಾರಿಯರ್ ಹಡಗು ವಾಲಿಕೊಂಡಿದ್ದರಿಂದ, ಸುಮಾರು 10 ಕಂಟೈನರ್ ಗಳು ಸಮುದ್ರಕ್ಕೆ ಉರುಳಿವೆ ಎಂದು ಶಂಕಿಸಲಾಗಿದೆ. ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 24 ಮಂದಿ ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ನೌಕಾಪಡೆ ರಕ್ಷಿಸಿವೆ.

ಈ ಕಂಟೈನ‌ರ್ ಗಳು ಸಾಗರ ಅನಿಲ ತೈಲ ಹಾಗೂ ತೀರಾ ಕಡಿಮೆ ಪ್ರಮಾಣದ ಸಲ್ಫ‌ರ್ ಇಂಧನ ತೈಲವನ್ನು ಹೊತ್ತೊಯ್ಯತ್ತಿದ್ದವು ಎಂದು ಹೇಳಲಾಗಿದೆ.ಅಪಾಯಕಾರಿ ವಸ್ತುವನ್ನು ಹೊಂದಿದ್ದ ಕಂಟೈನರ್ ಗಳು ಅರಬ್ಬಿ ಸಮುದ್ರಕ್ಕೆ ಉರುಳಿದ್ದು, ಈ ವಸ್ತು ಸಮುದ್ರ ತೀರಕ್ಕೆ ಕೊಚ್ಚಿಕೊಂಡು ಬರಬಹುದು ಎಂದು ಕರಾವಳಿ ರಕ್ಷಣಾ ಪಡೆ ಮಾಹಿತಿ ನೀಡಿದ್ದು, ಹೀಗಾಗಿ, ಜನರು ಅದರ ಬಳಿ ತೆರಳಬಾರದು ಅಥವಾ ಅದನ್ನು ಮುಟ್ಟುಬಾರದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ಎಚ್ಚರಿಕೆ ನೀಡಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!