ಮಂಗಳೂರು: ಸಚಿವ ಗುಂಡೂರಾವ್‌ಗೆ ಮುಸ್ಲಿಂ ಮುಖಂಡನಿಂದ ತರಾಟೆ, ಗೊಂದಲ ಸೃಷ್ಟಿ

Picture of Savistara

Savistara

Bureau Report

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಚೋದನಕಾರಿ ಭಾಷಣಗಳ ಕುರಿತು ಮಾತನಾಡುತ್ತಿದ್ದಾಗ, ಕಾಂಗ್ರೆಸ್‌ನ ಸ್ಥಳೀಯ ಮುಸ್ಲಿಂ ಮುಖಂಡರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ಸೃಷ್ಟಿಸಿದ ಘಟನೆ ನಡೆಯಿತು. ಇದರಿಂದ ಕೋಪಗೊಂಡ ಸಚಿವರು ಆ ಮುಖಂಡನನ್ನು ಹೊರಗೆ ಕಳುಹಿಸುವಂತೆ ತನ್ನ ಸಿಬ್ಬಂದಿಗಳಿಗೆ ಸೂಚಿಸಿದ ಘಟನೆಯು ಇದೆ ವೇಳೆ ನಡೆಯಿತು.

ಮಂಗಳೂರು : ಮೇ 31: ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಚೋದನಕಾರಿ ಭಾಷಣಗಳ ಕುರಿತು ಮಾತನಾಡುತ್ತಿದ್ದಾಗ, ಕಾಂಗ್ರೆಸ್‌ನ ಸ್ಥಳೀಯ ಮುಸ್ಲಿಂ ಮುಖಂಡರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ಸೃಷ್ಟಿಸಿದ ಘಟನೆ ನಡೆಯಿತು.ಇದರಿಂದ ಕೋಪಗೊಂಡ ಸಚಿವರು ಆ ಮುಖಂಡನನ್ನು ಹೊರಗೆ ಕಳುಹಿಸುವಂತೆ ತನ್ನ ಸಿಬ್ಬಂದಿಗಳಿಗೆ ಸೂಚಿಸಿದ ಘಟನೆಯು ಇದೆ ವೇಳೆ ನಡೆಯಿತು.

ಸಚಿವ ಗುಂಡೂರಾವ್ ಅವರು ಸಮಾಜದಲ್ಲಿ ಶಾಂತಿ ಕದಡುವಂತಹ ಪ್ರಚೋದನಕಾರಿ ಭಾಷಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರೊಬ್ಬರು, “ಮೊನ್ನೆ ನಡೆದ ಕೊಲೆಯು ಪ್ರಚೋದನಕಾರಿ ಭಾಷಣದಿಂದಲೇ ಆಗಿದೆ” ಎಂದು ನೇರವಾಗಿ ಆರೋಪಿಸಿದರು.

ಈ ಅನಿರೀಕ್ಷಿತ ಆರೋಪದಿಂದ ಕೆರಳಿದ ಸಚಿವ ದಿನೇಶ್ ಗುಂಡೂರಾವ್ ಅವರು, ಆ ಮುಖಂಡನ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಏಯ್, ಯಾರು ಅವನು? ಮೊದಲು ಅವನನ್ನು ಹೊರಗೆ ಹಾಕ್ರಿ” ಎಂದು ಗಟ್ಟಿದನಿಯಲ್ಲಿ ಕೂಗಾಡಿದರು.

ತಕ್ಷಣವೇ ಅಲ್ಲಿದ್ದ ತಮ್ಮ ಸಿಬ್ಬಂದಿಗೆ ಆ ಮುಖಂಡನನ್ನು ಸಭಾಂಗಣದಿಂದ ಹೊರಕ್ಕೆ ಕಳುಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಘಟನೆಯಿಂದ ಸುದ್ದಿಗೋಷ್ಠಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯು ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

[t4b-ticker]
error: Content is protected !!