ನಾನು ಸತ್ತಿಲ್ಲ, ಚೆನ್ನಾಗಿದ್ದೀನಿ: ಸುಳ್ಳು ಸುದ್ದಿಗಳ ವಿರುದ್ಧ ನಟ ದೊಡ್ಡಣ್ಣ ಕಿಡಿ

Picture of Savistara

Savistara

Bureau Report

ಹಿರಿಯ ನಟ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ದೊಡ್ಡಣ್ಣ, ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದಾರೆ.

‘ಯಾರೋ ಅವಿವೇಕಿಗಳು ನಾನು ಬೆಳಿಗ್ಗೆ ಏಳುವ ಮುಂಚೆಯೇ ನಾನು ನಿಧನವಾಗಿದ್ದೇನೆ ಎಂದು ವದಂತಿಗಳನ್ನು ಹಬ್ಬಿಸಿದ್ದಾರೆ. ಈ ವದಂತಿಗಳು ಶುದ್ಧ ಸುಳ್ಳು. ನಾನು ಆರೋಗ್ಯವಾಗಿದ್ದೀನಿ. ನೆಮ್ಮದಿಯಾಗಿದ್ದೀನಿ. ನಿಮ್ಮೆಲ್ಲರ ಆಶೀರ್ವಾದ ಸದಾ ಹೀಗೆ ಇದ್ದರೆ ನಾನು ನೂರು ಕಾಲ ಬದುಕುತ್ತೇನೆ ಎಂಬ ನಂಬಿಕೆ ನನಗೆ ಇದೆ’ ಎಂದು ಹೇಳಿದ್ದಾರೆ.ಈ ವಿಡಿಯೊಗೆ ಅವರ ಅಭಿಮಾನಿಗಳು ಅಣ್ಣ ನೀವು ಇನ್ನೂ ನೂರು ಕಾಲ ಚೆನ್ನಾಗಿರಿ ಎಂದು ಹಾರೈಸಿದ್ದಾರೆ.

[t4b-ticker]
error: Content is protected !!