ಸುಳ್ಯ ತಾಲೂಕಿನ ಪೆರುವಾಜೆಯ ಮುಂಡಾಜೆಯಲ್ಲಿ 75 ಮೀಟರ್ ಉದ್ದಕ್ಕೆ ಗುಡ್ಡ ಕುಸಿತ | ಸ್ಥಳಕ್ಕೆ ತಹಶೀಲ್ದಾರ್ ಸಹಿತ ಅಧಿಕಾರಿಗಳ ತಂಡ ಭೇಟಿ

Picture of Savistara

Savistara

Bureau Report

ಬಾರೀ ಮಳೆಯ ಪರಿಣಾಮ ಸುಳ್ಯ ತಾಲೂಕಿನ ಬೆಳ್ಳಾರೆಯ ಪೆರುವಾಜೆಯ ಮುಂಡಾಜೆಯಲ್ಲಿ ಗುಡ್ಡ ಜರಿದು ಸುಮಾರು 75 ಮೀಟರ್ ರಸ್ತೆ ಮೇಲೆ ಮಣ್ಣು ನಿಂತಿದ್ದು 20 ಕುಟುಂಬಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ಮೇ.31ರಂದು ಮಧ್ಯಾಹ್ನದ ವೇಳೆಗೆ ಈ ಅವಘಡ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ. ಆರ್.ಐ. ಅವಿನ್, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪಂಚಾಯತ್ ಸದಸ್ಯರು, ಪಿಡಿಒ ಪ್ರಭಾರ ತಿರುಮಲೇಶ್ವರ ಇಂಜಿನಿಯರ್ ಗಳ ತಂಡ, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.ಘಟನೆಯಿಂದ ಕಾಂಕ್ರೀಟ್ ರಸ್ತೆಯ ಸಂಪರ್ಕ ಕಡಿತವಾಗಿದೆ. ರಸ್ತೆಯ ಆ ಭಾಗದಲ್ಲಿರುವ 20 ರಷ್ಟು‌ ಕುಟುಂಬಕ್ಕೆ ಸಂಪರ್ಕ ಇಲ್ಲವಾಗಿದೆ.75 ಮೀಟರ್ ಗೂ ಹೆಚ್ಚು ಉದ್ದಕ್ಕೆ ರಸ್ತೆಗೆ ಮಣ್ಣು ಬಿದ್ದಿರುವುದರಿಂದ ಅದನ್ನು ತೆರವು ಮಾಡುವುದು ಸಧ್ಯಕ್ಕೆ ಕಷ್ಟವಾಗಿದ್ದು, ಪರ್ಯಾಯ ರಸ್ತೆಯ ನೋಡಲಾಗುತ್ತಿದೆ ಎಂದು ತಿಳಿದುಬಂದಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!