ಮಂಡ್ಯ ಮಗು ಸಾವಿನ ಪ್ರಕರಣ :ಪೊಲೀಸ್‌ ವಾಹನ ತಪಾಸಣೆಗೆ ವೇಳೆ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತಿಲ್ಲ – ಕೀಲಿ ಕೈ ಕಸಿದುಕೊಳ್ಳುವಂತಿಲ್ಲ

Picture of Savistara

Savistara

Bureau Report

ಮಂಡ್ಯದಲ್ಲಿ ಮಗುವಿನ ಸಾವಿನ ದುರಂತದ ನಂತರ, ಕರ್ನಾಟಕ ಪೊಲೀಸ್ ಇಲಾಖೆ ವಾಹನ ತಪಾಸಣೆಗೆ ಹೊಸ, ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದೆ.ಸಾರ್ವಜನಿಕರ ಮತ್ತು ಪೊಲೀಸರ ಸುರಕ್ಷತೆಗೆ ಒತ್ತು ನೀಡಿರುವ ಈ ಮಾರ್ಗಸೂಚಿಗಳ ಕುರಿತು ಪೂರ್ಣ ವಿವರಗಳನ್ನು ಓದಿ

ಬೆಂಗಳೂರು: ಮಂಡ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಮೂರು ವರ್ಷದ ಮಗುವಿನ ಸಾವಿನ ದುರ್ಘಟನೆಯಿಂದ ತೀವ್ರ ಮುಖಭಂಗಕ್ಕೊಳಗಾದ ರಾಜ್ಯ ಪೊಲೀಸ್‌ ಇಲಾಖೆ, ವಾಹನ ತಪಾಸಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಸಾರ್ವಜನಿಕರ ಹಾಗೂ ಪೊಲೀಸರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ಹೊಸ ನಿಯಮಾವಳಿಗಳನ್ನು ಬಿಡುಗಡೆಗೊಳಿಸಿದ್ದು. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.

ಮಂಡ್ಯದಲ್ಲಿ ಮಗು ಸಾವು ಹಾಗೂ ದಾವಣಗೆರೆಯಲ್ಲಿ ಪೊಲೀಸ್‌ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣಗಳನ್ನು ಉಲ್ಲೇಖಿಸಿ ಆದೇಶ ಹೊರಡಿಸಿರುವ ಸಲೀಂ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವಾಗ ರಸ್ತೆ ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿರುವುದರಿಂದ ಸಾರ್ವಜನಿಕರ ಹಾಗೂ ಪೊಲೀಸರ ಜೀವಕ್ಕೆ ಕುತ್ತು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಾಹನ ತಪಾಸಣೆ ವೇಳೆ ಪಾಲಿಸಬೇಕಾದ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿದೆ.

ಏನಿದು ಮಂಡ್ಯ ದುರಂತ ?

ಮೇ 26 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿ ನಿವಾಸಿಗಳಾದ ವಾಣಿ-ಅಶೋಕ್‌ ದಂಪತಿಯ ಮೂರೂವರೆ ವರ್ಷದ ಪುತ್ರಿ ಹೃತೀಕ್ಷಾ.ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹಳೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಕೆಟ್ ತಪಾಸಣೆಗಾಗಿ ಬೈಕ್‌ ಅಡ್ಡಗಟ್ಟಿದಾಗ ಆಯತಪ್ಪಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಳು. ಈ ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಟ್ರಾಫಿಕ್ ಪೊಲೀಸರ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು, ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಲು ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಹೊಸ ಮಾರ್ಗಸೂಚಿಗಳು ಇಂತಿವೆ:

ಅನಗತ್ಯ ತಡೆ ಬೇಡ: ವಾಹನಗಳ ದಾಖಲೆ ಪರೀಕ್ಷಿಸಲು ಸಕಾರಣವಿಲ್ಲದೆ ವಾಹನಗಳನ್ನು ತಡೆದುತಪಾಸಣೆಗೊಳಪಡಿಸಬಾರದು.ಕಣ್ಣಿಗೆ ಕಾಣುವ ಉಲ್ಲಂಘನೆಗೆಮಾತ್ರ ಕ್ರಮ: ಸ್ಪಷ್ಟವಾಗಿಗೋಚರಿಸುವ ಸಂಚಾರನಿಯಮ ಉಲ್ಲಂಘನೆಗಳುಕಂಡುಬಂದಲ್ಲಿ ಮಾತ್ರ ಅಂತಹವಾಹನಗಳನ್ನು ನಿಲ್ಲಿಸಿ ಪ್ರಕರಣದಾಖಲಿಸಬೇಕು.

ಸುರಕ್ಷಿತ ತಪಾಸಣೆ:

ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಡೆಯಬಾರದು.ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತೆ ಸೂಚಿಸಬಾರದು.ದ್ವಿಚಕ್ರ ವಾಹನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಅಥವಾ ವಾಹನಗಳ ಕೀಲಿ ಕೈ ಕಸಿದುಕೊಳ್ಳುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು.ಬೆನ್ನಟ್ಟುವ ಬದಲು ತಂತ್ರಜ್ಞಾನ ಬಳಕೆ: ವೇಗವಾಗಿ ಚಲಿಸುವ ವಾಹನಗಳನ್ನು ಬೆನ್ನಟ್ಟುವ ಬದಲು, ಅವುಗಳ ನೋಂದಣಿ

ಸಂಖ್ಯೆಯನ್ನು ಗುರುತಿಸಿ, ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನಿಸಿ, ತದನಂತರ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕು.ಪೊಲೀಸರ ಸುರಕ್ಷತೆಗೆ ಆದ್ಯತೆ:ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಭೌತಿಕವಾಗಿ ಪ್ರಕರಣ ದಾಖಲಿಸುವಾಗ ಹಾಗೂ ವಾಹನ ತಪಾಸಣೆ ಮಾಡುವಾಗ ಪೊಲೀಸರು ತಮ್ಮ ಸುರಕ್ಷತೆಗಾಗಿ Reflective Jacket (ಪ್ರತಿಫಲಕ ಜಾಕೆಟ್) ಧರಿಸಬೇಕು.ಸಂಜೆ ವೇಳೆ ಕಡ್ಡಾಯವಾಗಿ ಎಲ್‌ಇಡಿ ಬಟನ್‌ಗಳನ್ನು

ಉಪಯೋಗಿಸಬೇಕು.ವಾಹನ ತಪಾಸಣೆ ಸಂದರ್ಭದಲ್ಲಿ ಕಡ್ಡಾಯವಾಗಿ Body Worn Camera (ದೇಹಕ್ಕೆ ಧರಿಸುವ ಕ್ಯಾಮರಾ) ಬಳಸಬೇಕು.ಸಂಪರ್ಕ ರಹಿತ ಪ್ರಕರಣಗಳು:ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಎಂಸಿ) ಅಥವಾ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ಇರುವ ಕಡೆಗಳಲ್ಲಿ ಆದಷ್ಟು ಸಂಪರ್ಕ 23 (Contactless) ಪ್ರಕರಣಗಳನ್ನು ದಾಖಲಿಸಲು ಆದ್ಯತೆ ನೀಡಬೇಕು.

ಜಾಗೃತಿ ಕಾರ್ಯಕ್ರಮಗಳು:

ಅನಾಹುತಗಳನ್ನು ತಪ್ಪಿಸಲು ಮತ್ತು ಸಂಚಾರ ನಿಯಮಗಳ ಪಾಲನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಅತಿ ವೇಗದ ವಾಹನಗಳಿಗೆ ತಂತ್ರಜ್ಞಾನ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡದೆ, ಅಂತಹ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ (FTVR) ದಾಖಲಿಸಲು ತಂತ್ರಜ್ಞಾನವನ್ನು ಬಳಸಬೇಕು.

ಸುರಕ್ಷಿತ ತಪಾಸಣಾ ಸ್ಥಳ:

ವಾಹನಗಳ ವೇಗವನ್ನು ನಿಯಂತ್ರಿಸಲು, ತಪಾಸಣಾ ಸ್ಥಳದಿಂದ ಸುಮಾರು 100-150 ಮೀಟರ್‌ ಮೊದಲೇ ರಿಪ್ಲೆಕ್ಟಿವ್ ರಬ್ಬ‌ರ್ ಕೋನ್‌ಗಳು ಮತ್ತು ಇತರೆ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಬೇಕು. ರಾತ್ರಿ ವೇಳೆ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್‌ಗಳ ಬಳಿ ತಪಾಸಣೆ ನಡೆಸಬೇಕು.ನಾಕಾಬಂಧಿ ನಿಯಮ: ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು.ತಪಾಸಣೆ ವೇಳೆ ಸಂಚಾರ ಪೊಲೀಸರ ನೆರವು ಪಡೆಯಬೇಕು.

[t4b-ticker]
error: Content is protected !!