ಮಂಗಳೂರು, [ ಜೂ 2]: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ. ಜಿಲ್ಲಾ ಪೊಲೀಸ್ ಇಲಾಖೆಯು ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಆರೋಪ ಹೊತ್ತಿರುವ ಒಟ್ಟು 36 ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿರುವುದಾಗಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಈ ಕುರಿತು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಗಡಿಪಾರಿಗೆ ಪ್ರಸ್ತಾಪಿಸಲಾದ ವ್ಯಕ್ತಿಗಳ ಹೆಸರು, ವಯಸ್ಸು ಹಾಗೂ ಅವರು ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತಾರೆ ಎಂಬ ವಿವರಗಳನ್ನು ನೀಡಲಾಗಿದೆ.ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾದ ವ್ಯಕ್ತಿಗಳ ವಿವರಗಳುಹೀಗಿವೆ:
ಹಸೈನಾರ್ (46 ವರ್ಷ), ಬಂಟ್ವಾಳ ನಗರಪವನ್ ಕುಮಾರ್ (33 ವರ್ಷ), ಬಂಟ್ವಾಳ ಗ್ರಾಮಾಂತರಚರಣ್ @ ಚರಣ್ ರಾಜ್ (28 ವರ್ಷ), ಬಂಟ್ವಾಳಗ್ರಾಮಾಂತರಗಣೇಶ @ ಗಣೇಶ ಪೂಜಾರಿ (35 ವರ್ಷ), ವಿಟ್ಲ ಪೊಲೀಸ್ ಠಾಣೆಅಬ್ದುಲ್ ಖಾದರ್ @ ಸೌಕತ್ (31 ವರ್ಷ), ವಿಟ್ಲ ಪೊಲೀಸ್ ಠಾಣೆಚಂದ್ರಹಾಸ (23 ವರ್ಷ), ವಿಟ್ಲ ಪೊಲೀಸ್ ಠಾಣೆಅಬ್ದುಲ್ ಲತೀಫ್ (40 ವರ್ಷ), ಬಂಟ್ವಾಳ ಗ್ರಾಮಾಂತರಮಹಮ್ಮದ್ ಅಶ್ರಫ್ (44 ವರ್ಷ), ಬಂಟ್ವಾಳ ಗ್ರಾಮಾಂತರಮೊಯ್ದಿನ್ ಅಮ್ನಾನ್ @ ಅದ್ದು (21 ವರ್ಷ), ಬಂಟ್ವಾಳ ಗ್ರಾಮಾಂತರಭರತ್ ರಾಜ್ ಬಿ « ಭರತ್ ಕುಮ್ಮೇಲು (38 ವರ್ಷ),
ಬಂಟ್ವಾಳ ಗ್ರಾಮಾಂತರಮಹಮ್ಮದ್ ಸಫಾನ್ (26 ವರ್ಷ), ಬಂಟ್ವಾಳ ನಗರ ರಾಜು ಯಾನೆ ರಾಜೇಶ್ (35 ವರ್ಷ), ಬಂಟ್ವಾಳ ನಗರ ಭುವಿ ಯಾನೆ ಭುವಿತ್ ಶೆಟ್ಟಿ (35 ವರ್ಷ), ಬಂಟ್ವಾಳ ನಗರಅಶ್ರಪ್ ಬಿ & ಗರಗಸ ಅಶ್ರಪ್ (43 ವರ್ಷ), ಪೂಂಜಾಲಕಟ್ಟೆಮನೋಜ್ ಕುಮಾರ್ (37 ವರ್ಷ), ಬೆಳ್ತಂಗಡಿ ಮಹೇಶ ಶೆಟ್ಟಿ ತಿಮರೋಡಿ (53 ವರ್ಷ), ಬೆಳ್ತಂಗಡಿ ಹಕೀಂ ಕೂರ್ನಡ್ಕ @ ಅಬ್ದುಲ್ ಹಕೀಂ (38 ವರ್ಷ), ಪುತ್ತೂರು ನಗರಅಜಿತ್ ರೈ (39 ವರ್ಷ), ಪುತ್ತೂರು ನಗರಅರುಣ್ ಕುಮಾರ್ ಪುತ್ತಿಲ (54 ವರ್ಷ), ಪುತ್ತೂರು ನಗರಮನೀಶ್ ಎಸ್ (31 ವರ್ಷ), ಪುತ್ತೂರು ನಗರ ಅಬ್ದುಲ್ ರಹಿಮಾನ್ (38 ವರ್ಷ), ಪುತ್ತೂರು ನಗರ ಕೆ. ಅಝೀಜ್ (18 ವರ್ಷ), ಪುತ್ತೂರು ನಗರ ಕಿಶೋರ್ (34 ವರ್ಷ), ಪುತ್ತೂರು ಗ್ರಾಮಾಂತರ ರಾಕೇಶ್ ಕೆ (30 ವರ್ಷ), ಪುತ್ತೂರು ಗ್ರಾಮಾಂತರ ನಿಶಾಂತ್ ಕುಮಾರ್ (22 ವರ್ಷ), ಪುತ್ತೂರು ಗ್ರಾಮಾಂತರಮಹಮ್ಮದ್ ನವಾಝ್ (32 ವರ್ಷ), ಕಡಬ ಠಾಣೆ ಸಂತೋಷ್ ಕುಮಾರ್ ರೈ – ಸಂತು ಅಡೆಕ್ಕಲ್ (35 ವರ್ಷ), ಉಪ್ಪಿನಂಗಡಿ ಠಾಣೆಜಯರಾಮ (25 ವರ್ಷ), ಉಪ್ಪಿನಂಗಡಿ ಠಾಣೆ
ಸಂಶುದ್ದೀನ್ (36 ವರ್ಷ), ಉಪ್ಪಿನಂಗಡಿ ಠಾಣೆಸಂದೀಪ (24 ವರ್ಷ), ಉಪ್ಪಿನಂಗಡಿ ಠಾಣೆ64ಮಹಮ್ಮದ್ ಶಾಕಿರ್ (35 ವರ್ಷ), ಉಪ್ಪಿನಂಗಡಿ ಠಾಣೆಅಬ್ದುಲ್ ಅಝೀಝ್ @ ಕರಾಯ ಅಝೀಝ್ (36 ವರ್ಷ), ಉಪ್ಪಿನಂಗಡಿ ಠಾಣೆಲತೇಶ್ ಗುಂಡ್ಯ (32 ವರ್ಷ), ಸುಳ್ಯ ಠಾಣೆಮನೋಹರ @ ಮನು (40 ವರ್ಷ), ಸುಳ್ಯ ಠಾಣೆಪ್ರಸಾದ್ (35 ವರ್ಷ), ಬೆಳ್ಳಾರೆ ಠಾಣೆಶಮೀರ್ ಕೆ (38 ವರ್ಷ), ಬೆಳ್ಳಾರೆ ಠಾಣೆ
ಈ ವ್ಯಕ್ತಿಗಳ ವಿರುದ್ಧ ಗಡಿಪಾರು ಪ್ರಕ್ರಿಯೆಗಳನ್ನು ಕೈಗೊಳ್ಳುವ ಮೂಲಕ, ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಬದ್ಧವಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಕಾನೂನಿನ ಅನ್ವಯ ಈ ಪ್ರಕ್ರಿಯೆಗಳು ಮುಂದುವರಿಯಲಿದ್ದು, ಸಂಬಂಧಪಟ್ಟ ಪ್ರಾಧಿಕಾರವು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.
ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ತರುವವರ ವಿರುದ್ಧ ಪೊಲೀಸ್ ಇಲಾಖೆ ಮುಂದೆಯೂ ಕಠಿಣ ಕ್ರಮಗಳನ್ನು ಮುಂದುವರಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.













































