ಸಂಸದರಾಗಿ ಕ್ಯಾ.ಬ್ರಿಜೇಶ್ ಚೌಟ ಒಂದು ವರ್ಷ ಪೂರ್ಣ | ಹೆದ್ದಾರಿ ಅಭಿವೃದ್ಧಿ,ರೈಲ್ವೆ ವಿಭಾಗಕ್ಕೆ ಆದ್ಯತೆ,ಬ್ಯಾಕ್ ಟೂ ಊರು ಕಲ್ಪನೆಗೆ ಹೊಸ ಆಯಾಮ

Picture of Savistara

Savistara

Bureau Report

ದಕ್ಷಿಣಕನ್ನಡ ಲೋಕಸಭಾ ಸದಸ್ಯರಾಗಿ ಕ್ಯಾ.ಬ್ರಿಜೇಶ್ ಚೌಟ ಇಂದಿಗೆ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಂಸದರಾಗಿ ಅಧಿಕಾರಿಗಳ ಮಟ್ಟದಲ್ಲಿ ಕೇಂದ್ರ ಸಚಿವರ ಜೊತೆ ನಿಕಟ ಸಂಭಂಧವರಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುವ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಮಂಗಳೂರು- ಕುಕ್ಕೆ ಸುಬ್ರಹ್ಮಣ್ಯ ರೈಲ್ವೆ ಕಳೆದ 18 ವರ್ಷಗಳಿಂದ ನೆನೆಗುದಿಗೆ ಬಿದ್ದಿತು ಅದೂ ಮತ್ತೆ ಶುರುವಾಗಿದ್ದು ಸಾವಿರಾರು ಯಾತ್ರಾರ್ಥಿಗಳಿಗೆ ಅನುಕೂಲವಾಗಿದೆ.ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಹಾಗೂ ರಸ್ತೆಗೆ ನೂತನವಾಗಿ ಡಿಪಿಆರ್ ಆ ಯೋಜನೆಗೆ ವೇಗ ನೀಡುವ ಕೆಲಸವಾಗುತ್ತಿದೆ.ಗೇಲ್ ಸಂತ್ರಸ್ತರಿಗೆ ಉದ್ಯೋಗ ಅವಕಾಶ, ಬ್ಯಾಕ್ ಟೂ ಊರು ಕಲ್ಪನೆಯಡಿಯಲ್ಲಿ ಎಂಎಸ್ ಈಜೇಡ್ ಜೊತೆ ಇಟಲಿ ಕಂಪನಿ ಒಪ್ಪಂದ ಮಾಡಿ 1500 ಕೋಟಿ ಹೂಡಿಕೆ ಮೂಲಕ 600 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ,ಬಿಸಿರೋಡು -ಸುರತ್ಕಲ್ ರಸ್ತೆ ಹದೆಗೆಟ್ಟ ಸಂದರ್ಭದಲ್ಲಿ ಡಾಮರೀಕರಣಕ್ಕಾಗಿ 26 ಕೋಟಿ ಅನುದಾನ, ತಲಪಾಡಿ-ಹೆಜಮಾಡಿ ಹೆದ್ದಾರಿ ಮರು ಡಾಮರೀಕರಣ,ಕಲ್ಲಡ್ಕ ಫ್ಲೈ ಓವರ್ ಗೆ ಅಧಿಕಾರ ಮಟ್ಟದಲ್ಲಿ ಫಾಲೋ ಆಫ್ ಮಾಡಿದ ಕಾರಣ ಮಳೆಗಾಲ ಮುಂದೆ ಸಂಚಾರಕ್ಕೆ ತೆರೆದಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇ ಎಸ್ಐ ಆಸ್ಪತ್ರೆ ಮೇಲ್ದರ್ಜೆ ಗೆ ಕೇಂದ್ರ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗಲಿದೆ,ಪ್ರಸಾದ್ ಯೋಜನೆಯಡಿಯಲ್ಲಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮತ್ತು ತೋಡಿಕಾನ ದೇವಸ್ಥಾನ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಅಧಿಕಾರಿಗಳ ಮಟ್ಟದಲ್ಲಿ ತ್ವರಿತಗತಿಯಲ್ಲಿ ಕೆಲಸ ಮಾಡುವ ಕಾರ್ಯಕ್ಷಮತೆ ಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!