ನವದೆಹಲಿ: ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದ (Delhi University) ವಿದ್ಯಾರ್ಥಿ ಚುನಾವಣೆಯಲ್ಲಿ ಆರ್‌ಎಸ್‌ಎಸ್ (RSS) ಬೆಂಬಲಿತ ಎಬಿವಿಪಿ (ABVP) ವಿದ್ಯಾರ್ಥಿ ಸಂಘಟನೆಯು ಭರ್ಜರಿ ಜಯ ಸಾಧಿಸಿದ್ದು, ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ (NSUI) ಮಕಾಡೆ ಮಲುಗಿದ್ದು, ಆದರ ಅಭ್ಯರ್ಥಿಗಳು ಹಾಗೂ ಪ್ರಣಾಳಿಕಯು Gen-Z ಗಳನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ, ಭಾರತೀಯ ವಿದ್ಯಾರ್ಥಿ ಒಕ್ಕೂಟ (SFI) ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಸಂಘಟನೆಗಳು ಯಾವುದೇ ಸ್ಥಾನವನ್ನು ಗಳಿಸುವಲ್ಲಿ ವಿಫಲವಾಗಿದೆ.
ಆರ್‌ಎಸ್‌ಎಸ್ ಬೆಂಬಲಿತ ಎಬಿವಿಪಿಯ ಆರ್ಯನ್ ಮಾನ್ ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಭರ್ಜರಿ 16,000 ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಸಂಯೋಜಿತ ಎನ್‌ಎಸ್‌ಯುಐ ಅಭ್ಯರ್ಥಿ ಜೋಸ್ಲಿನ್ ನಂದಿತಾ ಚೌಧರಿ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಅಧ್ಯಕ್ಷ ಸ್ಥಾನವನ್ನ ಎನ್‌ಎಸ್‌ಯುಐ ಮೂಲಕ ಕಿತ್ತಕೊಂಡಿದೆ.
ಮುಂದುವರೆದು, ಆರ್ಯನ್ ಅವರು 28,841 ಮತಗಳನ್ನು ಪಡೆದರೆ, ಎನ್‌ಎಸ್‌ಯುಐನ ಜೋಸ್ಲಿನ್ 12,645 ಮತಗಳನ್ನು ಗಳಿಸಿದರು. ಇದರೊಂದಿಗೆ ನಾಲ್ಕು ಹುದ್ದೆಗಳಲ್ಲಿ, ಎಬಿವಿಪಿ ಸಂಘಟನೆಯು ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ – ಈ ಮೂರ ಸ್ಥಾನವನ್ನ ಗೆದ್ದಿತು ಆದರೆ ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ವಿಫಲವಾಯಿತು.Gen-Z ಮನ ಸೆಳೆಯುವಲ್ಲಿ ವಿಫಲವಾದ ರಾಹುಲ್ ವೋಟ್ ಚೋರಿಕಾಂಗ್ರೆಸ್ ವರಿಷ್ಢ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವೋಟ್ ಚೋರಿ ಪ್ರಚಾರದ ಮೂಲಕ ಜನರಲ್ ಝಡ್ ಯುವಕರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರೂ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣಾ ಫಲಿತಾಂಶಗಳು ಬಿಜೆಪಿಗೆ ಆ ವರ್ಗದಿಂದ ಭಾರಿ ಬೆಂಬಲವಿದೆ ಎಂದು ದೃಢಪಡಿಸಿದೆ. ಅದಕ್ಕೆ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಡಿಯುಎಸ್‌ಯು ಚುನಾವಣೆಯಲ್ಲಿ ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರನ್ನು ಗೆದ್ದರೆ, ಕಾಂಗ್ರೆಸ್‌ನ ಎನ್‌ಎಸ್‌ಯುಐ ಕೇವಲ ಒಂದನ್ನು ಗೆದ್ದಿತು. ಇದರೊಂದಿಗೆ ಈ ವರ್ಷದ ಆರಂಭದಲ್ಲಿ, ಎಡಪಕ್ಷಗಳ ಭದ್ರಕೋಟೆ ಎಂದು ಪರಿಗಣಿಸಲಾದ ಜೆಎನ್‌ಯುನಲ್ಲಿಯೂ ಎಬಿವಿಪಿ ನೆಲೆ ಕಂಡುಕೊಂಡಿರುವುದು Gen-Z ಮನ ಸೆಳೆಯುವಲ್ಲಿ ಕೇಸರಿ ಪಡೆ ಯಶಸ್ವಿಯಾಗುತ್ತಿದೆ ಎನ್ನುವುದು ಕನ್ಫರ್ಮ್ ಆಗಿದೆ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆ 2025 ಫಲಿತಾಂಶಗಳು
ಎಬಿವಿಪಿ:ಅಧ್ಯಕ್ಷ – ಆರ್ಯನ್ ಮಾನ್ 28841
ಉಪಾಧ್ಯಕ್ಷ – ಗೋವಿಂದ್ ತನ್ವಾರ್ 20547
ಕಾರ್ಯದರ್ಶಿ – ಕುನಾಲ್ ಚೌಧರಿ 23779
ಜಂಟಿ ಕಾರ್ಯದರ್ಶಿ- ದೀಪಿಕಾ ಝಾ 21825
ಎನ್‌ಎಸ್‌ಯುಐ
ಅಧ್ಯಕ್ಷ – ಜೋಶ್ಲಿನ್ ನಂದಿತಾ ಚೌಧರಿ 12645
ಉಪಾಧ್ಯಕ್ಷ – ರಾಹುಲ್ ಝಾನ್ಸ್ಲಾ 29339
ಕಾರ್ಯದರ್ಶಿ – ಕಬೀರ್ 16117
ಜಂಟಿ ಕಾರ್ಯದರ್ಶಿ – ಲುವ್ಕುಶ್ ಭದಾನ 17380
ಯಾರು ಈ ಎಬಿವಿಪಿ ಅಭ್ಯರ್ಥಿ ಆರ್ಯನ್ ಮಾನ್?
ಎಬಿವಿಪಿ ಅಧ್ಯಕ್ಷೀಯ ಅಭ್ಯರ್ಥಿ ಆರ್ಯನ್ ಮಾನ್ ಅವರ ತಂದೆ ಯಶಸ್ವಿ ಉದ್ಯಮಿಯಾಗಿದ್ದು, ಎಡಿಎಸ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದಾರೆ. ಇನ್ನು ಆರ್ಯನ್ ಮಾನ್ ಅವರ ಚುನವಾಣಾ ಪ್ರಚಾರದ ಸಮಯದಲ್ಲಿ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಪರ ಪ್ರಚಾರಕ್ಕಾಗಿ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅವರೇ ಫೀಲ್ಡ್ಗಿಳಿದಿದ್ದರು.
ಇನ್ನು, ಹರಿಯಾಣದ ಬಹದ್ದೂರ್‌ಗಢದ ನಿವಾಸಿಯಾಗಿರುವ ಆರ್ಯನ್ ಮಾನ್ ಅವರು ಹಂಸರಾಜ್ ಕಾಲೇಜಿನಿಂದ ಪದವೀಧರರಾಗಿದ್ದು, ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ, ಅವರು ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.











































