ನಮ್ಮ ಮೆಟ್ರೊಗೆ ₹26,447 ಕೋಟಿ ಬಿಡುಗಡೆ: ಕೇಂದ್ರ

Picture of Savistara

Savistara

Bureau Report

ನವದೆಹಲಿ: ಬೆಂಗಳೂರಿನ ನಮ್ಮ ಮೆಟ್ರೊ ಯೋಜನೆಗೆ (ಎರಡನೇಹಂತ, 2ಎ/2ಬಿ, ಮೂರನೇ ಹಂತ) ಕೇಂದ್ರ ಸರ್ಕಾರವು ಜುಲೈ ಅಂತ್ಯದ ವರೆಗೆ ₹26,447 ಕೋಟಿ ಬಿಡುಗಡೆ ಮಾಡಿದೆ ಎಂದು ವಸತಿ ಮತ್ತು ನಗರ ವ್ಯವಹಾರ ಖಾತೆಯ ರಾಜ್ಯ ಸಚಿವ ಟೋಖಾನ್‌ ಸಾಹು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಗುರುವಾರ ಪ್ರಶೋತ್ತರ ಅವಧಿಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗಿನ ಹಂತ 2ಎ ಹಾಗೂ 2ಬಿ ಮಾರ್ಗದ ಶೇ 72.50ರಷ್ಟು ಕಾಮಗಾರಿ ಮುಗಿದಿದೆ. ಶೇ 70.17ರಷ್ಟು ಆರ್ಥಿಕ ಪ್ರಗತಿ ಆಗಿದೆ ಎಂದು ಅವರು ಹೇಳಿದ್ದಾರೆ.

[t4b-ticker]
error: Content is protected !!