ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರವಿದೇಶ ಪ್ರವಾಸಗಳ ಚರ್ಚೆ ಹಾಗೂ ಅದಕ್ಕೆ ತಗಲುವ ಖರ್ಚುಗಳ ಬಗ್ಗೆ ಪರ-ವಿರೋಧ ಚರ್ಚೆಗಳು ಸದಾ ಸಕ್ರಿಯವಾಗಿವೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಸಂಸದರು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಅಧಿಕೃತ ದತ್ತಾಂಶ ಪ್ರಕಾರ, 2025ರ ಸಾಲಿನಲ್ಲಿ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಗಳಿಗೆ ಬರೋಬ್ಬರಿ ₹187 ಕೋಟಿ ವೆಚ್ಚವಾಗಿದೆ.
ರಾಜ್ಯಸಭೆಯಲ್ಲಿ ಸಂಜಯ್ ಸಿಂಗ್ ಮತ್ತು ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಅವರು ನೀಡಿರುವ ಉತ್ತರದ ಮಾಹಿತಿ ಇಲ್ಲಿವೆ.
2025ರಲ್ಲಿ ₹187 ಕೋಟಿ ವೆಚ್ಚ:
2025ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ಜಪಾನ್ ಸೇರಿದಂತೆ 23 ದೇಶಗಳ ಪ್ರವಾಸಕ್ಕೆ ಒಟ್ಟು ₹187 ಕೋಟಿ ವೆಚ್ಚವಾಗಿದೆ.
2026ರ ವೆಚ್ಚ (ಈವರೆಗೆ):2026ರಲ್ಲಿ ಈವರೆಗೆ ಕೈಗೊಂಡಿರುವ ವಿದೇಶ ಪ್ರವಾಸಗಳಿಗೆ ಒಟ್ಟು ₹74.58 ಕೋಟಿ ವೆಚ್ಚವಾಗಿದೆ. ಇದರಲ್ಲಿ ಜುಲೈನಲ್ಲಿ ಕೈಗೊಂಡಿರುವ ಇಂಡೋನೇಷ್ಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸಗಳ ವೆಚ್ಚವೂ ಸೇರಿವೆ.
2021-2024ವರೆಗಿನ ವೆಚ್ಚ :
ಜುಲೈ 2025 ರಲ್ಲಿ, ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರವಾಗಿ ಸರ್ಕಾರವು ಪ್ರಧಾನಮಂತ್ರಿಯವರ ವಿದೇಶ ಪ್ರವಾಸಗಳ ದತ್ತಾಂಶವನ್ನು ಹಂಚಿಕೊಂಡಿತ್ತು, ಅದರ ಪ್ರಕಾರ 2021 ರಿಂದ 2024 ರವರೆಗಿನ ಅವರ ವಿದೇಶ ಪ್ರವಾಸಗಳಿಗೆ ಸಂಬಂಧಿಸಿದ ಒಟ್ಟು ವೆಚ್ಚ ಸುಮಾರು ₹295 ಕೋಟಿ ಆಗಿತ್ತು. ಇದರಲ್ಲಿ 2021ರಲ್ಲಿ ಬಾಂಗ್ಲಾದೇಶ (₹1.01 ಕೋಟಿ), ಅಮೆರಿಕ (₹19.63 ಕೋಟಿ), ಇಟಲಿ (₹6.90 ಕೋಟಿ) ಮತ್ತು ಯುಕೆ (₹8.57 ಕೋಟಿ) ಭೇಟಿ ಸೇರಿವೆ ಎಂದು ಅಂಕಿಅಂಶಗಳು ತಿಳಿಸಿವೆ.
ಮೋದಿ ವಿದೇಶ ಪ್ರವಾಸದ ವಿವರ ಅಂಕಿಗಳಲ್ಲಿ (2021-2026):
2021 (ಬಾಂಗ್ಲಾದೇಶ, ಅಮೆರಿಕ, ಇಟಲಿ, ಬ್ರಿಟನ್): ₹36 ಕೋಟಿ
2022 (ವಿವಿಧ ದೇಶಗಳು) :₹55.82 ಕೋಟಿ
2023 ( ವಿವಿಧ ದೇಶಗಳು ): ₹92ಕೋಟಿ
2024 ( ರಷ್ಯಾ, ಉಕ್ರೇನ್, ಅಮೇರಿಕಾ, ಬ್ರೆಜಿಲ್ ಸೇರಿ 16 ದೇಶಗಳು )₹109 ಕೋಟಿ
2025 (ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ಜಪಾನ್ ಸೇರಿ 23 ದೇಶಗಳು): ₹187 ಕೋಟಿ
2026 (ಈವರೆಗೆ – ಇಂಡೋನೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ): ₹74.58 ಕೋಟಿ
ಈವರೆಗೆ ಬರೋಬ್ಬರಿ ₹557.51 ಕೋಟಿ ವೆಚ್ಚ:
ಅಂದರೆ 2021ರಿಂದ ಈವರೆಗೆ ಮೋದಿ ವಿದೇಶ ಪ್ರವಾಸಗಳಿಗೆ ಒಟ್ಟು ₹557.51 ಕೋಟಿ ವೆಚ್ಚವಾಗಿದೆ.
2025ರಲ್ಲಿ ಯಾವ ದೇಶದ ಪ್ರವಾಸಕ್ಕೆ ಎಷ್ಟು ವೆಚ್ಚ?:
*ಫ್ರಾನ್ಸ್ ₹25.60ಕೋಟಿ
*ಅಮೆರಿಕ: ₹16.55 ಕೋಟಿ
*ಸೌದಿ ಅರೇಬಿಯಾ: ₹15.54 ಕೋಟಿ
*ಬ್ರೆಜಿಲ್: ₹17,72 ಕೋಟಿ
*ಚೀನಾ: ₹10,60 ಕೋಟಿ
*ಬ್ರಿಟನ್: ₹9,92 ಕೋಟಿ
2025ರಲ್ಲಿ ಮೋದಿ ಭೇಟಿ ನೀಡಿದ ಇತರ ದೇಶಗಳಲ್ಲಿ ಮಾರಿಷಸ್ , ಥಾಯ್ಲೆಂಡ್, ಶ್ರೀಲಂಕಾ, ಸೈಪ್ರಸ್, ಕೆನಡಾ, ಪ್ರೊವೇಷಿಯಾ, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ನಮೀಬಿಯಾ, ಮಾಲ್ಮೀಮ್ಸ್, ಜಪಾನ್, ಭೂತಾನ್, ದಕ್ಷಿಣ ಆಫ್ರಿಕಾ, ಜೋರ್ಡಾನ್, ಒಮಾನ್ ಮತ್ತು ಇಥಿಯೋಪಿಯಾ ಸೇರಿವೆ.
ಹೂಡಿಕೆ ಮತ್ತು ಒಪ್ಪಂದಗಳು:
ಜುಲೈ 2021ರಿಂದ ಈವರೆಗೆ 316 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಏಪ್ರಿಲ್ 2021 ರಿಂದ 2025ರ ಡಿಸೆಂಬರ್ ಅವಧಿಯಲ್ಲಿ 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹರಿದುಬಂದಿದೆ.
ದ್ವಿಪಕ್ಷೀಯ ಬಾಂಧವ್ಯ ವೃದ್ಧಿ:
ಈ ಹಿಂದಿನ ವೆಚ್ಚ:
ಅಮೇರಿಕಾ( 2011): ₹10.74ಕೋಟಿ
ರಷ್ಯಾ (2013): ₹9.95 ಕೋಟಿ
ಫ್ರಾನ್ಸ್ (2011): ₹8.33ಕೋಟಿ
ಜರ್ಮನಿ (2013): ₹6.02ಕೋಟಿ











































