ಸಾವಿರಾರು ಜನರೊಂದಿಗೆ ಪುತ್ತೂರಿನಲ್ಲಿ ತಿರಂಗ ಯಾತ್ರೆ ಮಹಾಲಿಂಗೇಶ್ವರ ದೇವಳದಿಂದ ಚಾಲನೆ – ಹೂ -ಮಳೆಯ ಸಿಂಚನದೊಂದಿಗೆ ಯಾತ್ರೆ

Picture of Savistara

Savistara

Bureau Report

ಪುತ್ತೂರು: ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಆಯೋಜಿಸಲಾದ ರಾಜ್ಯದ ಪ್ರಥಮ ಬೃಹತ್ ತಿರಂಗ

ಯಾತ್ರೆ ಸಾವಿರಾರು ಜನರ ಅಭೂತಪೂರ್ವ ಭಾಗವಹಿಸುವಿಕೆಯಿಂದ ಅದ್ದೂರಿಯಾಗಿ ಮಹಾಲಿಂಗೇಶ್ವರ ದೇವಳದ ಬಳಿಯಿಂದ ಚಾಲನೆ ನೀಡಲಾಯಿತು.

ಹೂ ಮಳೆ ಮೆರವಣಿಗೆ ಪುಷ್ಪಾರ್ಚಾಣೆಯಲ್ಲಿ ಆಕರ್ಷಣೆಯಾಯಿತು.ನ್ಯಾಯವಾದಿ ಅರುಣ್ ಶ್ಯಾಮ್ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಾಷ್ಟ್ರಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಸಂಸದ ಕ್ಯಾ| ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋ‌ರ್ ಕುಮಾ‌ರ್ ಪುತ್ತೂರು, ಮಾಜಿ ಶಾಸಕ ಸಿ ಟಿ ರವಿ, ಬೆಳ್ತಂಗಡಿ ಶಾಸಕ ಹರಿಶ್ ಪೂಂಜಾ, ಸುಳ್ಯ ಶಾಸಕಿ ಭಾಗೀರಥಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ದ ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಪುತ್ತೂರು ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಜೊತೆಗಿದ್ದರು.

[t4b-ticker]
error: Content is protected !!