ಇರಾನ್ ಯುದ್ಧದ ನಡುವೆ ಶಸ್ತ್ರಾಸ್ತ್ರ ಕೊರತೆ: ಟ್ರಂಪ್‌-ಹೆಗ್ರೆತ್ ನಡುವೆ ವಾಗ್ವಾದ?

Picture of Savistara

Savistara

Bureau Report

ವಾಷಿಂಗ್ಟನ್: ಪ್ರಮುಖ ಯುದ್ಧ ಸಾಮಗ್ರಿಗಳ ಕೊರತೆ ವಿಚಾರವಾಗಿಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗೈತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಮಾಧ್ಯಮ ವರದಿ ಪ್ರಕಾರ, ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಗಳ ನಡುವೆ ಅಮೆರಿಕದ ಕ್ಷಿಪಣಿ ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಅಗತ್ಯವಾದ ಕೆಲವು ಪ್ರಮುಖ ಶಸ್ತ್ರಾಸ್ತ್ರಗಳ ದಾಸ್ತಾನು ಕಡಿಮೆಯಾಗುತ್ತಿರುವ ಕುರಿತು ಟ್ರಂಪ್ ಅವರು ಹೆಗೈತ್ ಅವರನ್ನು ಪ್ರಶ್ನಿಸಿದ್ದಾರೆ. ವಿಶೇಷವಾಗಿ THAAD ಮತ್ತು ಇತರೆ ದೂರಗಾಮಿ ಕ್ಷಿಪಣಿಗಳ ಲಭ್ಯತೆ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.ಆದರೆ, ಈ ವರದಿಗಳನ್ನು ಶ್ವೇತಭವನ ಮತ್ತು ಪೆಂಟಗನ್ ತಳ್ಳಿಹಾಕಿವೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರೆ ಕರೋಲಿನ್ ಲೀವಿಟ್, ‘ಟ್ರಂಪ್ ಮತ್ತು ಹೆಗ್ರೆತ್ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಪೆಂಟಗನ್ ಕೂಡ ಶಸ್ತ್ರಾಸ್ತ್ರ ಕೊರತೆ ಕುರಿತ ವರದಿಗಳು ಅತಿರಂಜಿತವಾಗಿವೆ ಎಂದು ಹೇಳಿದೆ.

ಏತನ್ಮಧ್ಯೆ, ‘ಅಮೆರಿಕದ ಬಳಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ಇದೆ’ ಎಂದು ಟ್ರಂಪ್‌ ಅವರು ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.ದೇಶದಲ್ಲಿ ಯುದ್ಧ ಸಾಮಾಗ್ರಿಗಳ ಉತ್ಪಾದನೆ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳಿರುವ ಅವರು, ಶಸ್ತ್ರಾಸ್ತ್ರ ಕೊರತೆ ಕುರಿತು ವರದಿ ಮಾಡಿದ ಮಾಧ್ಯಮಗಳ ವಿರುದ್ಧವೂ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂತಯೇ ಈ ದೇಶದ್ರೋಹದ ಹೇಳಿಕೆಗಳನ್ನು ‘ಸೋರಿಕೆ’ ಮಾಡಿದವರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.

[t4b-ticker]
error: Content is protected !!