ಪ್ರತಿಭಟನೆ ಮಾಡಿದಾಕ್ಷಣ ‘ಜೆನ್‌ ಝೀ’ಗಳು ದೇಶ ವಿರೋಧಿಗಳಾಗಲ್ಲ: ಮೋಹನ್ ಭಾಗವತ್

Picture of Savistara

Savistara

Bureau Report

ನವದೆಹಲಿ: ಪ್ರತಿಭಟನೆ ಮಾಡಿದಾಕ್ಷಣ ‘ಜೆನ್ ಝೀ’ಗಳು(ಇಂದಿನ ಯುವ ಪೀಳಿಗೆ) ದೇಶ ವಿರೋಧಿಗಳಾಗುವುದಿಲ್ಲ, ಪ್ರತಿಭಟಿಸುವುದು ಅವರ ಹಕ್ಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.

‘ಇಂಡಿಯಾಸ್‌ ಇಂಟರ್‌ನ್ಯಾಷನಲ್ ಮೂವ್‌ಮೆಂಟ್ ಟು ಯುನೈಟ್ ನೇಷನ್ಸ್’ನ (ಐಐಎಂಯುಎನ್) 15ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಭಾಗವತ್, ಜೆನ್ ಝೀಗಳು ನಮ್ಮ ಜನರು. ಅವರ ಆತಂಕ ಮತ್ತು ಕಳವಳಗಳನ್ನು ಆಲಿಸಿ ಬಗೆಹರಿಸಬೇಕು ಎಂದಿದ್ದಾರೆ.ಯುವಪೀಳಿಗೆ ಪ್ರತಿಭಟನೆ ಮಾಡಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಕೆಲವು ಮಾರ್ಗಗಳು ಮತ್ತು ನಿಯಮಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ, ‘ಕಾಕ್ರೋಚ್ ಜನತಾ ಪಾರ್ಟಿ’ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಮಣಿದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಭಾಗವತ್ ಅವರಿಂದ ಈ ಹೇಳಿಕೆ ಬಂದಿದೆ.

[t4b-ticker]
error: Content is protected !!