ಪುತ್ತೂರಿನಲ್ಲಿ ತಿರಂಗ ಯಾತ್ರೆ: ಪ್ರತಿಭಟನೆ ಹೆಸರಿನಲ್ಲಿ ನಡೆದ ದೇಶದ್ರೋಹದ ಚಟುವಟಿಕೆಯನ್ನು ವಿರೋಧಿದ್ದೇನೆ-ಸಿಟಿ ರವಿ

Picture of Savistara

Savistara

Bureau Report

ಪ್ರತಿಭಟನೆ ವಿರೋಧಿಸಿಲ್ಲ, ಪ್ರತಿಭಟನೆ ಹೆಸರಿನಲ್ಲಿ ನಡೆದ ದೇಶದ್ರೋಹದ ಚಟುವಟಿಕೆಯನ್ನು ವಿರೋಧಿದ್ದೇನೆ ಬಿಜೆಪಿ ಮುಖಂಡ ಸಿಟಿ ರವಿ ಪ್ರತಿಕ್ರಿಯೆ. ನಾನು ಚಳುವಳಿಯಲ್ಲಿ ಬಂದವನು, ಪ್ರತಿಭಟನೆ ಪ್ರಜಾಪ್ರಭುತ್ವದ ಒಂದು ಭಾಗ RSS ಸರ ಸಂಘಚಾಲಕರೂ ಇದನ್ನೇ ಹೇಳಿದ್ದಾರೆ.

ಚಳುವಳಿ ನೆಪದಲ್ಲಿ ಸೈನಿಕರನ್ನು ಬೈಯೋದು, ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಅವಹೇಳನಕಾರಿಯಾಗಿ ದೂಷಿಸಿರೋದು ಚಳುವಳಿಯ ಉದ್ದೇಶವನ್ನೇ ಬದಲಾಯಿಸುತ್ತದೆ. ಶಿಕ್ಷಣದಲ್ಲಿ ಬದಲಾವಣೆ ಬಯಸುವವರು ಇಂತ ಕೆಲಸ ಮಾಡೋದಿಲ್ಲ. ವಿದ್ಯಾರ್ಥಿಗಳ ಹೆಸರಿನಲ್ಲಿ ಅರಾಜಕತೆ ಸೃಷ್ಠಿ ಮಾಡಿದವರಿಗೆ ನಮ್ಮವಿರೋಧ.ಕಾಂಗ್ರೆಸ್ ನಲ್ಲಿ ಮಂತ್ರಿಯಾಗುವ ಯೋಗ್ಯತೆ ಇರುವ ಮಹಿಳೆಯರೇ ಇಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿ ನೀಡಿದ ಕಾಂಗ್ರೆಸ್ ಪಕ್ಷ ಎಐಸಿಸಿ ಅಧ್ಯಕ್ಷರೇ ಸೋನಿಯಾ ಗಾಂಧಿಯನ್ನು ಕೇಳಬೇಕೆಂದು ತಲೆಬಗ್ಗಿಸಿ ಕೂತಿದ್ದಾರೆ.ಸಂಪುಟದಲ್ಲಿ 33 ಶೇಕಡಾ ಅಲ್ಲ ಒಂದು ಶೇಕಡವನ್ನೂ ನೀಡಿಲ್ಲ. ಹೇಳೋದೊಂದು ಮಾಡೋದೊಂದು ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಡ ಮಹಿಳಾ ಸಬಲೀಕರಣ ಅನ್ನೋದು ಕಾಂಗ್ರೆಸ್ ನದ್ದ ರಾಜಕೀಯ ಭಾಷಣ ಮಾತ್ರ, ಕಾಂಗ್ರೇಸ್ ನಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಮಹಿಳೆಯರು ಈ ಬಗ್ಗೆ ಯೋಚಿಸಬೇಕು.

ಸಭಾಪತಿ ಹುದ್ದೆ ರಾಜಕೀಯ ಹುದ್ದೆಯಲ್ಲ, ಪರಿಷತ್ತು ಯಾವತ್ತೂ ವಿಸರ್ಜನೆಯಾಗದ ಶಾಶ್ವತವಾಗಿರುವ ಮೇಲ್ಮನೆಯದು ಅದಕ್ಕೆ ತನ್ನದೇ ಆದ ಪರಂಪರೆಯೂ ಇದೆ. ಕಾಂಗ್ರೆಸ್ ಪಕ್ಷ ಸಂವಿಧಾನಿಕ ಹುದ್ದೆಯನ್ನು ಪಕ್ಷದ ಬಲಾಬಲದ ವ್ಯಾಪ್ತಿಯಲ್ಲಿ ನೋಡಿದ್ದು ದುರಾದೃಷ್ಟಕರ, ಸಂವಿಧಾನದ ಘನತೆ ಮತ್ತು ಗೌರವರನ್ನು ಎತ್ತಿಹಿಡಿಯೋದಂದ್ರೆ ಸಂವಿಧಾನಿಕ ಹುದ್ದೆಗಳನ್ನು ರಕ್ಷಿಸುವ ಒಂದು ಭಾಗವಾಗಿದೆ ಇದನ್ನು ಕಾಂಗ್ರೇಸ್ ಮರೆತು ಬಿಟ್ಟಿದೆ.ಅವರ ಸಚಿವ ಸಂಪುಟದ ಪಟ್ಟಿಯಲ್ಲೇ ವಿಧಾನ ಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಹೆಸರನ್ನು ಅಳವಡಿಸಿರೋದು ಸಂವಿಧಾನಿಕ ಸಂಸ್ಥೆಯನ್ನು ದುರ್ಬಲಗೊಳಿಸುವ ಯತ್ನ ಹೊರಟ್ಟಿ ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದನ್ನೂ ನಾವು ಕೇಳುತ್ತೇವೆ.ಪುತ್ತೂರಿನಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡ ಸಿ.ಟಿ ರವಿಯ ಹೇಳಿಕೆ.

[t4b-ticker]
error: Content is protected !!