GST ಉಳಿತಾಯದ ಉತ್ಸವ ಸಂಭ್ರಮಾಚರಣೆ

Picture of Savistara

Savistara

Bureau Report

ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರವು ನಾಗರೀಕ ದೇವೋಭವ ಎಂಬ ಅದ್ಭುತ ಘೋಷಣೆಯೊಂದಿಗೆ GST ದರವನ್ನು ಕಡಿತಗೊಳಿಸುವ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿರುವ

ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ, ಶಿವಮೊಗ್ಗ ಆಟೋಮೊಬೈಲ್ ಅಸೋಷಿಯೇಷನ್ ಹಾಗೂ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟಗಳ ಅಡಿಯಲ್ಲಿ ಜಿ.ಎಸ್.ಟಿ ಇಳಿಕೆಯ ಸಂಭ್ರಮಾಚರಣೆ ಪ್ರಯುಕ್ತ ನಗರದ ರಾಹುಲ್ ಹುಂಡೈ ಷೋ ರೂಮ್ ಮತ್ತು ಬಜಾಜ್ ಷೋ ರೂಮ್ ಗೆ ಭೇಟಿ ನೀಡಿ, ಸಿಹಿ ಹಂಚಿ ಕೇಂದ್ರ ಸರಕಾರದ GST ಉಳಿತಾಯದ ಯೋಜನೆ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡುವಂತೆ ಮನವಿ ಮಾಡಲಾಯಿತು.

GST ವಿನಾಯಿತಿಯಿಂದ ನೂತನ ವಾಹನಕೊಳ್ಳುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು ಗ್ರಾಹಕರು ಸಂತಸದಿಂದ ಖರೀದಿ ಮಾಡುತ್ತಿದ್ದಾರೆ.

ಈ ವೇಳೆ ಗ್ರಾಹಕರಿಗೆ ನೂತನ ವಾಹನಗಳ ಕೀ ಹಸ್ತಾಂತರಿಸಲಾಯಿತು.ಈ ಸಮಯದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಅವರು, ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರಾದ ದತ್ತಾತ್ರಿ ಅವರು, ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟಗಳ ಸಹ ಸಂಚಾಲಕರಾದ ಭವಾನಿ ರಾವ್ ಮೋರೆ ಅವರು,

ಪ್ರಮುಖರಾದ ರಾಕೇಶ್ ಗೌಡ ಅವರು, ಸುಮಲತಾ ಭೂಪಾಳಂ ಅವರು, ಹರ್ಷ ಕಾಮತ್ ಅವರು, ರಾಹುಲ್ ಹುಂಡೈ ಷೋ ರೂಮ್ ಮಾಲೀಕರಾದ ರಾಹುಲ್ ಅವರು, ರವಿಕುಮಾರ್ ಅವರು, ಬಜಾಜ್ ಷೋ ರೂಮ್ ನ ಜನರಲ್ ಮ್ಯಾನೇಜರ್ ಪ್ರಭಾಕರ್ ರಾವ್ ಅವರು, ಸೇಲ್ಸ್ ಮ್ಯಾನೇಜರ್ ಯೋಗೀಶ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

[t4b-ticker]
error: Content is protected !!