ನ್ಯೂಯಾರ್ಕ್ ಸಿಟಿ ಮೇಯರ್; ಡೆಮೋಕ್ರಾಟ್ ಜೋಹ್ರಾನ್ ಮಮ್ಹಾನಿಗೆ ಗೆಲುವು

Picture of Savistara

Savistara

Bureau Report

ನ್ಯೂಯಾರ್ಕ್‌: ಎಡಪಂಥೀಯ( Democratic Party)ಜೋಹ್ರಾನ್ ಮಮ್ಹಾನಿ ಅವರು ಅಮೆರಿಕದ ಅತಿದೊಡ್ಡ ನಗರ ನ್ಯೂಯಾರ್ಕ್ ಸಿಟಿಯ ಮೊದಲ ಮುಸ್ಲಿಂ ಮೇಯರ್ ಆಗಿ ಮಂಗಳವಾರ (ನ4) ಆಯ್ಕೆಯಾಗಿದ್ದಾರೆ.ಡೆಮಾಕ್ರಟಿಕ್ ಪಕ್ಷದ 34 ರ ಹರೆಯದ ಯುವ ನಾಯಕ ಜೋಹ್ರಾನ್ ಮಮ್ಹಾನಿ ಆರ್ಥಿಕ ರಾಜಧಾನಿಯ ಮೊದಲ ಭಾರತೀಯ ಮೂಲದ ಮೇಯರ್ ಎನಿಸಿಕೊಂಡಿದ್ದಾರೆ. ಜೋಹ್ರಾನ್ ಮಮ್ಹಾನಿ ಅವರ ತಾಯಿ ಮೀರಾ ನಾಯರ್ ಭಾರತೀಯ ಅಮೆರಿಕನ್ ಚಲನಚಿತ್ರ ನಿರ್ಮಾಪಕಿ, ತಂದೆ ಮಹಮದ್‌ ಮಮ್ಹಾನಿ ಉಗಾಂಡಾ ಮೂಲದ ಶೈಕ್ಷಣಿಕ ಮತ್ತು ರಾಜಕೀಯ ನಿರೂಪಕರಾಗಿದ್ದರು. ಅವರು ಮುಂಬಯಿನಲ್ಲಿ ಹುಟ್ಟಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಪಕ್ಷವು ಭಿನ್ನಾಭಿಪ್ರಾಯ ಹೊಂದಿರುವ ಸಮಯದಲ್ಲಿ ಅವರ ಗೆಲುವು ಪ್ರಗತಿಪರ ಡೆಮೋಕ್ರಾಟ್‌ಗಳಿಗೆ ಒಂದು ಐತಿಹಾಸಿಕ ಕ್ಷಣವಾಗಿದೆ.ಜೋಹ್ರಾನ್ ಮಮ್ಹಾನಿ ಅವರು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಮತ್ತು ರಾಜಕೀಯವಾಗಿ ಪ್ರಭಾವಿಯಾಗಿದ್ದ, ತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯ ಮುನ್ನಾದಿನದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಅನುಮೋದನೆಯನ್ನು ಪಡೆದ ನ್ಯೂಯಾರ್ಕ್ ರಾಜ್ಯದ ಮಾಜಿ ಗವರ್ನರ್ ಆಂಡ್ರ ಕ್ಯುಮೊ ಅವರನ್ನು ಸೋಲಿಸಿದರು.ಮಮ್ಹಾನಿಯವರ ಗೆಲುವು ನ್ಯೂಯಾರ್ಕ್‌ನ ಮತದಾರರನ್ನು ಹುರಿದುಂಬಿಸಿದ ಕಾರ್ಮಿಕ ವರ್ಗದ ಸಂದೇಶ ಮತ್ತು ವೈಯಕ್ತಿಕ ವರ್ಚಸ್ಸಿನಿಂದಾಗಿ ಅದ್ಭುತವಾದ ಜಯ ತಂದುಕೊಟ್ಟಿದೆ ಎನ್ನಲಾಗಿದೆ.

ಮೋದಿ ಟೀಕೆ

ಜೋಹ್ರಾನ್ ಮಮ್ಹಾನಿ ಅವರು ಪ್ರಧಾನಿ ಮೋದಿ ಅವರನ್ನು ನಿರಂತರ ಟೀಕಿಸುತ್ತರುವವರಲ್ಲಿ ಒಬ್ಬರು. ಇತ್ತೀಚೆಗೆ ದೇವಾಲಯವೊಂದಕ್ಕೆ ಭೇಟಿ ನೀಡಿದ ವೇಳೆ ನಾನು ಬಹುತ್ವವನ್ನು ಆಚರಿಸುವ ಭಾರತದಲ್ಲಿ ಬೆಳೆದವನು, ಅದನ್ನು ಪಾಲಿಸುತ್ತೇನೆ ಎಂದು ಹೇಳಿದ್ದರು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!