MEESHO ಫೇಕ್ ಲಿಂಕ್ ಜಾಲ: ಮೂಡುಬಿದಿರೆಯಲ್ಲಿ ಹಲವರ ವಾಟ್ಸಾಪ್ ಹ್ಯಾಕ್?

Picture of Savistara

Savistara

Bureau Report

ಮೂಡುಬಿದಿರೆ: ‘ಮೀಶೋ ಲೂಟ್‌ ಗಿಫ್ಟ್’ (Meesho Loot Gift) ಎಂಬ ಹೆಸರಿನೊಂದಿಗೆ ಹರಿದಾಡುತ್ತಿರುವ ನಕಲಿ ವಾಟ್ಸಾಪ್ ಲಿಂಕ್‌ನಿಂದಾಗಿ ಮೂಡುಬಿದಿರೆ ಪ್ರದೇಶದ ಹಲವರ ಮೊಬೈಲ್ ಮತ್ತು ವಾಟ್ಸಾಪ್ ಖಾತೆಗಳು ಹ್ಯಾಕ್ ಆಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಭಾನುವಾರದಿಂದ ಈ ಫೇಕ್ ಲಿಂಕ್ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಳಕೆದಾರರನ್ನು ವಂಚಿಸುವ ಹುನ್ನಾರ ಇದಾಗಿದೆ. ಖ್ಯಾತ ಶಾಪಿಂಗ್ ಅಪ್ಲಿಕೇಶನ್ ಆದ ಮೀಶೋ (Meesho) ನ ಹೆಸರು ಮತ್ತು ಲೋಗೋವನ್ನು ದುರ್ಬಳಕೆ ಮಾಡಿಕೊಂಡು ಈ ನಕಲಿ ಲಿಂಕ್ ಅನ್ನು ಸೃಷ್ಟಿಸಲಾಗಿದೆ. “ಈ ಲಿಂಕ್ ಅನ್ನು ಗ್ರೂಪ್‌ಗಳು ಮತ್ತು ವೈಯಕ್ತಿಕ ವಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಿದರೆ ಆಕರ್ಷಕ ಉಡುಗೊರೆ (Gift) ಸಿಗುತ್ತದೆ” ಎಂಬ ಪ್ರಲೋಭನಕಾರಿ ಸಂದೇಶ ಇದರೊಂದಿಗೆ ಹರಿದಾಡುತ್ತಿದೆ.

ವಂಚನೆಯ ಸ್ವರೂಪ:

ಮೂಡುಬಿದಿರೆಯಲ್ಲಿ ಈ ಲಿಂಕ್‌ಗೆ ಕ್ಲಿಕ್ ಮಾಡಿದ ಕೆಲವರ ವಾಟ್ಸಾಪ್ಸಂಪೂರ್ಣವಾಗಿ ಹ್ಯಾಕ್ ಆಗಿದೆ. ಕೆಲವು ಸಂತ್ರಸ್ತರ ವಾಟ್ಸಾಪ್ ಸಂಖ್ಯೆಯಿಂದಲೇ ಬೇರೆಯವರಿಗೆ ‘ಹಣದ ಬೇಡಿಕೆ’ (Money Request) ಸಂದೇಶಗಳು ಹೋಗುತ್ತಿರುವುದು ವರದಿಯಾಗಿದೆ. ಇನ್ನು ಕೆಲವು ಬಳಕೆದಾರರು ಲಿಂಕ್ ತೆರೆದು ಸುಮ್ಮನಿದ್ದರೂ ಸಹ, ಅವರು ಇರುವ ಗ್ರೂಪ್‌ಗಳು ಮತ್ತು ಇತರ ಸಂಪರ್ಕ ಸಂಖ್ಯೆಗಳಿಗೆ ಅವರು ಕ್ಲಿಕ್ ಮಾಡಿದ ಫೇಕ್ ಲಿಂಕ್ ಸ್ವಯಂಚಾಲಿತವಾಗಿ ಫಾರ್ವಡ್್ರ ಆಗುತ್ತಿರುವುದು ಕಂಡುಬ೦ದಿದೆ.

ಇಂತಹ ನಕಲಿ ಲಿಂಕ್‌ಗಳ ಮೂಲಕ ಸೈಬ‌ರ್ ಕಳ್ಳರು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಣಕಾಸಿನ ವಿವರಗಳನ್ನು ಕದಿಯುವ ಸಾಧ್ಯತೆ ಇದೆ. ಸಾರ್ವಜನಿಕರು ಅಪರಿಚಿತ ಮೂಲಗಳಿಂದ ಬರುವ ಅಥವಾ ಆಮಿಷ ಒಡ್ಡುವ ಇಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಮತ್ತು ಯಾವುದೇ ಕಾರಣಕ್ಕೂ ಫಾರ್ವಡ್್ರ ಮಾಡದಿರುವುದು ಉತ್ತಮ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!