ಪ್ರಾಣಿ ದಾಳಿಯಿಂದ ಬೆಳೆ ನಷ್ಟಕ್ಕೆ ಪರಿಹಾರ:PMFBY ಅಡಿ 2026 ರಿಂದ ಹೊಸ ವಿಮಾ ಯೋಜನೆ | ಕೇಂದ್ರ ಸರ್ಕಾರ ಕ್ರಮ ಸ್ವಾಗತಿಸಿದ ಸಂಸದ ಬಿವೈ ರಾಘವೇಂದ್ರ

Picture of Savistara

Savistara

Bureau Report

ಕೇಂದ್ರ ಸರ್ಕಾರವು ರೈತರ ಬೆಳೆಗಳನ್ನು ಕಾಡು ಪ್ರಾಣಿಗಳ ದಾಳಿಯಿಂದ ಉಂಟಾಗುವ ನಷ್ಟದಿಂದ ರಕ್ಷಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ 2026ರಿಂದ ವಿಶೇಷ ಬೆಳೆ ವಿಮಾ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು ಈ ಬಗ್ಗೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸ್ವಾಗತಿಸಿದ್ದಾರೆ.

2026ರಿಂದ ದೇಶವ್ಯಾಪಿ ಈ ಯೋಜನೆ ರೈತರಿಗೆ ಹೊಸ ವಿಮಾ ರಕ್ಷಣಾ ವ್ಯವಸ್ಥೆಯಾಗಿದ್ದು, ಕಾಡುಪ್ರಾಣಿಗಳ ದಾಳಿಯಿಂದಾಗುವ ಬೆಳೆ ನಷ್ಟಕ್ಕೂ ಪರಿಹಾರ – ಮೊದಲ ಬಾರಿಗೆ ವಿಶೇಷ ಕವಚವನ್ನು ರೂಪಿಸಿದೆ.

72 ಗಂಟೆಗಳಲ್ಲೇ ನಷ್ಟ ಪರಿಶೀಲನೆ – ತ್ವರಿತ ವರದಿ ಮತ್ತು ಕ್ರಮ ಕೈಗೊಳ್ಳಲಿದ್ದು ಕೇಂದ್ರ ಸರ್ಕಾರದಿಂದ ನೇರ ಪರಿಹಾರ ಬಿಡುಗಡೆಯಾಗಲಿದೆ.ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಪ್ರಯೋಜನವಾಗಲಿದೆ – ಗಡಿ ಹಾಗೂ ಅರಣ್ಯ ಪ್ರದೇಶದ ರೈತರಿಗೆ ಹೆಚ್ಚಿನ ನೆರವು ನೀಡುವ ಕಾರ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಮತ್ತೊಂದು ದೊಡ್ಡ ಹೆಜ್ಜೆಯನ್ನಿಟ್ಟಿದೆ ಯೆಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ

[t4b-ticker]
error: Content is protected !!