ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಪಡೆದರೆ 5 ಗ್ರಾಂ ಚಿನ್ನದ ಪದಕ

Picture of Savistara

Savistara

Bureau Report

ಅಮೀನಗಡ (ಬಾಗಲಕೋಟೆ): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ625 ಅಂಕ ಪಡೆದ ವಿದ್ಯಾರ್ಥಿಗೆ 5 ಗ್ರಾಂ ಬಂಗಾರದ ಪದಕ ಮತ್ತು ಪ್ರಶಸ್ತಿ ನೀಡುವುದಾಗಿ ಪಟ್ಟಣದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜು ಉಪಪ್ರಾಚಾರ್ಯ ಆರ್.ಜಿ.ಸನ್ನಿ ಘೋಷಿಸಿದ್ದಾರೆ.ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶೇ.100 ಅಂಕ ಪಡೆದರೆ ವೈಯಕ್ತಿಕವಾಗಿ 5 ಗ್ರಾಂ ಬಂಗಾರದ ಪದಕ ನೀಡುತ್ತೇನೆ. ಈ ಬಹುಮಾನ ಒಬ್ಬ ವಿದ್ಯಾರ್ಥಿಗೆ ಮಾತ್ರವಲ್ಲ ಎಷ್ಟು ಜನ ವಿದ್ಯಾರ್ಥಿಗಳು 625 ಅಂಕ ಪಡೆಯುತ್ತಾರೋ ಎಲ್ಲರಿಗೂ ಬಂಗಾರದ ಪದಕ ಮತ್ತು ಪ್ರಶಸ್ತಿ ನೀಡಲಾಗುವುದು ಎಂದು ವಾಗ್ದಾನ ಮಾಡಿದ್ದಾರೆ.ಅಲ್ಲದೆ, ವಿದ್ಯಾರ್ಥಿಗಳು ಕಲಿಕೆಯತ್ತ ಪ್ರೇರಣೆ ನೀಡಲು ಆ‌ರ್.ಜಿ.ಸನ್ನಿ ಅವರು ಶಾಲೆಯಲ್ಲಿ ಕೇಳುವ ಪ್ರತಿ ಪ್ರಶ್ನೆಗೆ ಉತ್ತರ ನೀಡಿದರೆ 100 ರೂ. ಎಂಬ ಯೋಜನೆ ಜಾರಿಗೆ ತಂದಿದ್ದಾರೆ. ಇದು ಮಕ್ಕಳ ನಿರಂತರ ಕಲಿಕೆಗೆ ಅನುಕೂಲವಾಗಿದೆ. ಈಗ ಶಾಲೆಯಲ್ಲಿ 625 ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ 5 ಗ್ರಾಂ ಬಂಗಾರದ ಪದಕ ಮತ್ತು ಪ್ರಶಸ್ತಿ ನೀಡಲು ವಾಗ್ದಾನ ಮಾಡಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!