ಆತ್ಮನಿರ್ಭರ ಭಾರತದ ಮತ್ತೊಂದು ದೊಡ್ಡ ಹೆಜ್ಜೆ: ಗಗನಯಾನ ಪ್ರೋಗ್ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ!

Picture of Savistara

Savistara

Bureau Report

ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಗಗನಯಾನ ಮಿಷನ್‌ಗಾಗಿ ಹೆಚ್ಚಿನ ಸಾಮರ್ಥ್ಯದ ರಿಬ್ಬನ್ ಪ್ಯಾರಾಚೂಟ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಯಲ್ಲಿ ತನ್ನ ಪರಿಣತಿ ಸಾಬೀತು ಪಡಿಸುವ ಪರೀಕ್ಷೆಯಲ್ಲಿ ಡಿಆರ್ ಡಿಒ ಯಶಸ್ವಿಯಾಗಿದೆ.ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದಲ್ಲಿ ಫೆಬ್ರವರಿ 18 ರಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ-DRDOನ ರೈಲ್ ಟ್ರ್ಯಾಕ್ ರಾಕೆಟ್ ಪ್ಲೆಡ್ ಸೌಲಭ್ಯದಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.ಡೋಗ್ ಪ್ಯಾರಾಚೂಟ್‌ನ ಅರ್ಹತಾ ಮಟ್ಟದ ಲೋಡ್ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದು, ಈ ಮೂಲಕ ಭಾರತದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಇಸ್ರೋ, DRDO, TBRLನ ವಿವಿಧ ತಂಡಗಳ ಸಹಯೋಗದೊಂದಿಗೆ ಈ ಪರೀಕ್ಷೆಯನ್ನು ನಡೆಸಲಾಯಿತು.

ಆರ್‌ಟಿಆರ್‌ಎಸ್ ಒಂದು ವಿಶೇಷ ಡೈನಾಮಿಕ್ ಪರೀಕ್ಷಾ ಸೌಲಭ್ಯವಾಗಿದ್ದು, ಇದನ್ನು ಹೈ-ಸ್ಪೀಡ್ ಏರೋಡೈನಾಮಿಕ್‌ ಮತ್ತು ಬ್ಯಾಲಿಸ್ಟಿಕ್ ಮೌಲ್ಯಮಾಪನಗಳಿಗೆ ವ್ಯಾಪಕವಾಗಿ ಬಳಸಲಾಗುತ್ತದೆ. ಆರ್‌ಟಿಆರ್‌ಎಸ್ ಡೈನಾಮಿಕ್ ಪರೀಕ್ಷೆಯು ಪ್ಯಾರಾಚೂಟ್‌ನ ಹೆಚ್ಚುವರಿ ವಿನ್ಯಾಸ ಮತ್ತು ಸುರಕ್ಷತಾ ಅಂಚನ್ನು ತೋರಿಸುತ್ತದೆ ಸಚಿವಾಲಯ ತಿಳಿಸಿದೆ.ಗಗನಯಾನದ ಡೋಗ್ ಪ್ಯಾರಾಚೂಟ್‌ನ ಯಶಸ್ವಿ ಅರ್ಹತಾ ಪರೀಕ್ಷೆಯನ್ನು ನಡೆಸಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ, ಇಸ್ರೋ ಮತ್ತು ಉದ್ಯಮವನ್ನು ಶ್ಲಾಘಿಸಿದ್ದಾರೆ. ಆತ್ಮನಿರ್ಭರ ಭಾರತದ ಗುರಿಯನ್ನು ತಲುಪಲು ಈ ಪರೀಕ್ಷೆಯು ಮತ್ತೊಂದು ದೊಡ್ಡ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

[t4b-ticker]
error: Content is protected !!