ದುಬೈ: ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟ

Picture of Savistara

Savistara

Bureau Report

ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್-6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅದ್ದೂರಿಯಾಗಿ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಂಪಲ ಅವರು ತಮ್ಮ ಮಾತೃಶ್ರೀ ದಿವಂಗತ ಶ್ರೀಮತಿ ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್‌ ಕುಂಪಲ ಹಾಗೂ ಸಲಹೆಗಾರರಾದ ಹರೀಶ್ ಕೋಡಿ ಮತ್ತು ಸುನಿಲ್ ಮೊಟ್ಟೆಮನೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಮೀನಾ ಹರೀಶ್ ಕೋಡಿ, ಸುಪ್ರೀತಾ ಸುರೇಶ್, ರಕ್ಷಿತಾ ದೇರಾಜೆ ಹಾಗೂ ಮಾನಸ ದಿಲೀಪ್ ಉಳುವಾರು ಪ್ರಾರ್ಥನೆ ಸಲ್ಲಿಸಿದರೆ, ಯತೀಶ್ ಗೌಡ ಅವರು ಸ್ವಾಗತ ಭಾಷಣ ಮಾಡಿದರು. ಗಣೇಶ್ ಅಚ್ಚಂಡಿರ, ಆನಂದ್ ಪಟ್ಟೆ ವಳಾಲ್, ದಿಲೀಪ್‌ ಉಳುವಾರು ಮತ್ತು ಸುನಿಲ್ ಕರ್ಣಾಯನ ಅವರು ಪಂದ್ಯಾವಳಿಯ ಉದ್ಘಾಟನಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಜಿದ್ದಾಜಿದ್ದಿನಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ‘ಗೌಜಿ ಗಮ್ಮತ್’ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ‘ಕೂರ್ಗ್ ವಾರಿಯರ್ಸ್’ ತಂಡವು ರನ್ನರ್-ಅಪ್ ಪ್ರಶಸ್ತಿ ಪಡೆಯಿತು.ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ತ್ರೋಬಾಲ್ ಸೀಸನ್-1 ಪಂದ್ಯಾವಳಿಯಲ್ಲಿ 4 ತಂಡಗಳು ಪಾಲ್ಗೊಂಡಿದ್ದು, ‘ದುಬೈ ರಾಯಲ್ಸ್’ ಪ್ರಥಮ ಸ್ಥಾನ ಹಾಗೂ ‘ಟೀಂ ಬಾವಾಸ್‌’ ದ್ವಿತೀಯ ಸ್ಥಾನ ಗಳಿಸಿತು. ಉತ್ತಮ ಶಿಸ್ತಿನ ತಂಡ ಪ್ರಶಸ್ತಿಯ ಪ್ರಾಯೋಜಕರಾದ ಆನಂದ್ ವಳಾಲ್ ರವರು ಗೌಡ ಫ್ರೆಂಡ್ಸ್ ಕ್ಲಬ್ ಗೆ ಪ್ರಶಸ್ತಿಯನ್ನು ನೀಡಿದರು. ಕ್ರೀಡಾಕೂಟದ ಅಂಗವಾಗಿ ನಡೆದ ಮಹಿಳೆಯರ ಹಗ್ಗಜಗ್ಗಾಟ ಎಲ್ಲರ ಗಮನ ಸೆಳೆಯಿತು. ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಮನರಂಜನಾ ಆಟಗಳನ್ನು ಆಯುಶ್ ಕೋಡಿ ಮತ್ತು ಕಾವ್ಯ ಅವಿನಾಶ್ ರವರು ನಿರ್ವಹಿಸಿದರು.

ಕ್ರಿಕೆಟ್‌ ಪಂದ್ಯಾವಳಿಯ ತೀರ್ಪುಗಾರರಾಗಿ ಗಿರೀಶ್, ಸುಧೀರ್ ಮತ್ತು ಮನೋಜ್ ಅವರು ಕಾರ್ಯನಿರ್ವಹಿಸಿದರು.ಕಾರ್ಯಕ್ರಮದುದ್ದಕ್ಕೂ ಮನೋಜ್ ಕುಲಾಲ್ ಅವರು ತಮ್ಮ ಆಕರ್ಷಕ ವಾಗ್ಟರಿಯ ಮೂಲಕ ನೀಡುತ್ತಿದ್ದ ಕಾಮೆಂಟರಿ ಮೆಚ್ಚುಗೆಗೆ ಪಾತ್ರವಾಯಿತು. ಕ್ರೀಡಾ ಸಂಯೋಜಕರಾಗಿ ಪ್ರಶಾಂತ್ ವಿಟ್ಲ, ನಾಗೇಶ್, ಅಕ್ಷತ್ ಮಲ್ಲಿ ಹಾಗೂ ಅನೀಶ್ ಶೆಟ್ಟಿ ಸಹಕರಿಸಿದರು. ಕ್ರೀಡಾಕೂಟಕ್ಕೆ ಹರ್ಷ ತುಂಬಲು ಮೋಹನಿಶ್‌ ಕೊಂಬ್ರಾಣ ಅವರು ಡಿಜೆ ಸಂಗೀತದ ಮೂಲಕ ಮೆರುಗು ನೀಡಿದರೆ, ಕಿರಣ್ ಬೆದ್ರೋಡಿ ಮತ್ತು ಲಕ್ಷ್ಮೀನಾರಾಯಣ ಕಣ್ವತೀರ್ಥ ಅವರು ಇಡೀ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಕ್ಯಾಮೆರಾದ ಮೂಲಕ ಸೆರೆಹಿಡಿದರು.ಬೆಳಗಿನ ಮತ್ತು ಸಂಜೆಯ ಉಪಾಹಾರದ ವ್ಯವಸ್ಥೆಯನ್ನು ಸುಪ್ರೀತ್ ಕುಂಡಡ್ಕ, ಮೋಹನ್ ತೂಟೇರ, ನಿತಿನ್ ದೋರ್ತೋಡಿ, ಸುನಿಲ್ ಮೊಟ್ಟೆಮನೆ, ವಿನೋದ್ ಬಳ್ಳಡ್ಕ, ಅಜಿತ್ ಮಡೂರು ಒದಗಿಸಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಿರಣ್ ಗೌಡ ವಹಿಸಿದ್ದರು. ವಿಜೇತರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿದರು. ತೇಜ್ ಕೊರಂಬಡ್ಕ ಅವರು ಸಂಘದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದಿಲೀಪ್ ಉಳುವಾರು ವಂದನಾರ್ಪಣೆ ಮಾಡಿದರು. ನಿತಿನ್ ದೋರ್ತೋಡಿ ಮತ್ತು ಶ್ರಾವ್ಯ ಗೌಡ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಪ್ರಾಯೋಜಕರಾಗಿ ಸುರೇಶ್ ಕುಂಪಲ ಡುಮೆಕ್ ಇಂಜಿನಿಯರಿಂಗ್ ವರ್ಕ್ಸ್, ಮೋಹನ್ ಮೋಲ್ಟನ್ ಟೆಕ್ನಿಕಲ್ ಸರ್ವೀಸೆಸ್, ಶೆಟ್ಟಿ ಲಂಚ್ ಹೋಂ, ಪ್ರಸೀದ್ ಗೌಡ ಹ್ಯಾವೆನ್ ಸ್ಟೋನ್, ಯತೀಶ್ ಗೌಡ ಫಸ್ಟ್ ಮೊಲಿಕ್ಯೂಲ್ ಕಾರ್ಬನ್ಸ್, ಪುಲೋಮ ಗೌಡ ಬೆಟ‌ರ್ ವೇ ಕನ್ಸಲ್ಟಿಂಗ್‌ ಸರ್ವೀಸಸ್ ಮತ್ತು ಚಂದ್ರ ಬೆದ್ರೋಡಿಯವರು ಸಹಕರಿಸಿದ್ದರು. ರೋಶನ್ ಕಂಪ ಮತ್ತು ಶರತ್ ಚೊಕ್ಕಾಡಿ ಅವರ ನೇತೃತ್ವದಲ್ಲಿ ಇಡೀ ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿತು.ಸುಮಾರು 400ಕ್ಕೂ ಹೆಚ್ಚು ಸಮಾಜ ಬಾಂಧವರು ಈ ಕ್ರೀಡಾ ಸಂಭ್ರಮದಲ್ಲಿ ಪಾಲ್ಗೊಂಡರಲ್ಲದೆ, ಕೊನೆಯಲ್ಲಿ ಇಡೀ ಕ್ರೀಡಾಂಗಣವನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಚಗೊಳಿಸಿರುವುದು ಶ್ಲಾಘನೀಯವಾಗಿತ್ತು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!