ಹೊಸದಿಲ್ಲಿ: ದಿಲ್ಲಿ ಮುಂಬಯಿ ಸೇರಿದೇಶದ ಕೆಲವು ವಿಮಾನ ನಿಲ್ದಾಣಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಗುರುವಾರ ಬೆಳಗ್ಗೆ ಪ್ರಯಾಣಿಕರು ತೊಂದರೆ ಎದುರಿಸಿದ್ದಾರೆ. ಚೆಕ್ ಇನ್ ಹಾಗೂ ಬುಕ್ಕಿಂಗ್ ಸಂಬಂಧಿಸಿದ ನವಿರೈಟ್ ಸಾಫ್ಟ್‌ವೇರ್‌ನಲ್ಲಿ ದೋಷ ಕಂಡು ಬಂದಿದ್ದು ಇದಕ್ಕೆ ಕಾರಣವಾಗಿದೆ.ಈ ತಾಂತ್ರಿಕ ದೋಷವು ಭಾರತದಲ್ಲಿ ಮಾತ್ರವಲ್ಲದೆ, ಏಷ್ಯಾ-ಪೆಸಿಫಿಕ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿನ ಹಲವು ವಿಮಾನಯಾನ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ.ಪ್ರಮುಖವಾಗಿ ಚೆಕ್ ಇನ್ ಪ್ರಕ್ರಿಯೆಗೆ ಸಂಬಂಧಿಸಿದ ಸಾಫ್ಟ್‌ವೇರ್ ನಲ್ಲಿ ಉಂಟಾದ ಸಮಸ್ಯೆಯಿಂದ ವಿಳಂಬ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಬೆಳಗ್ಗೆ 6.45 ರಿಂದ 7.28ರ ವರೆಗೆ ಚೆಕ್ ಇನ್ ಆಗುವ ವೇಳೆ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇಂಡಿಗೋ, ಎಕ್ಸ್‌ಪ್ರೆಸ್, ಸ್ಪೆಸ್‌ಜೆಟ್ ಮತ್ತು ಆಕಾಶ ಏರ್‌ವಿಮಾನಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಸುಮಾರು 40 ನಿಮಿಷದ ಬಳಿಕ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
















































