ಸದ್ಯಕ್ಕಿಲ್ಲ ಇಂಧನಾಘಾತ |ಪೆಟ್ರೋಲ್, ಡೀಸೆಲ್ ದರ ಏರಿಕೆಯಿಲ್ಲ | ಪಂಚರಾಜ್ಯ ಚುನಾವಣೆ ಅಂತ್ಯದ ಬೆನ್ನಲ್ಲೇ ಕೇಂದ್ರ ಸ್ಪಷ್ಟನೆ ಹಲವು ರಾಜ್ಯಗಳಲ್ಲಿ ಆತಂಕದ ಖರೀದಿ ಹಿನ್ನೆಲೆ | ವದಂತಿ ನಂಬದಿರಲು ಸಚಿವಾಲಯ ಮನವಿ

Picture of Savistara

Savistara

Bureau Report

ಹೊಸದಿಲ್ಲಿ: ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆ ನಡುವೆಯೂ, ಪೆಟ್ರೊಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಭರವಸೆ ನೀಡಿದೆ.ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಜಾಗತಿಕ ಕಚ್ಚಾತೈಲ ದರ ಭಾರಿ ಏರಿಕೆಯಾಗಿದ್ದು, ರಿಟೇಲ್ ದರ ಏರಿಕೆಗೆ ಸರಕಾರ ಪಂಚರಾಜ್ಯ ಚುನಾವಣೆಯ ಕೊನೆಯ ಹಂತದ ಮತದಾನಕ್ಕಾಗಿ ಕಾಯುತ್ತಿದೆ. ಏ.29ರ ಬಳಿಕ ಯಾವುದೇ ಕ್ಷಣದಲ್ಲಾದರೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಬಹುದೆಂಬ ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರ ಸ್ಪಷ್ಟನೆ ನೀಡಿದೆ.enಅಲ್ಲದೆ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಆತಂಕದಿಂದ ಜನರು ಬಂಕ್‌ಗಳ ಮುಂದೆ ಸಾಲುಗಟ್ಟಿದ್ದು, ಮುಂಗಡ ಖರೀದಿಗೆ ಮುಂದಾಗಿದ್ದಾರೆ. ಪ.ಬಂಗಾಳದಲ್ಲಿ ಕೊನೆಯ ಹಂತದ ಮತದಾನದ ದಿನಾಂಕ (2.29) ಸಮೀಪಿಸುತ್ತಿದ್ದಂತೆ ಈ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಮೂರು ದಿನಗಳಿಂದ ರಾಜ್ಯದಲ್ಲಿ 400ಕ್ಕೂ ಹೆಚ್ಚು ಬಂಕ್ ಗಳು ಮುಚ್ಚಿವೆ. ಅದರಲ್ಲೂ ಡೀಸೆಲ್ ಬೇಡಿಕೆ ಶೇ. 30-33ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.”ಕೆಲವೆಡೆ ಜನರು ಆತಂಕದಿಂದ ಪೆಟ್ರೋಲ್, ಡೀಸೆಲ್ ಖರೀದಿಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ. ರಾಜ್ಯ ಸರಕಾರಗಳ ಜತೆ ಈ ಸಂಬಂಧ ನಿರಂತರ ಸಂಪರ್ಕ ದಲ್ಲಿದ್ದೇವೆ. ಎಲ್ಲಾ ರಿಟೇಲ್ ಮಳಿಗೆಗಳ ಮೇಲೆ ನಿಗಾ ಇರಿಸಲಾಗಿದ್ದು, ಯಾವುದೇ ಬಂಕ್ ಮುಚ್ಚದಂತೆ ತಡೆಯಲು ಆದ್ಯತೆ ಮೇರೆಗೆ ಇಂಧನ ಪೂರೈಕೆ ಮಾಡಲಾಗುತ್ತಿದೆ,” ಎಂದು ಪೆಟ್ರೋಲಿಯಂ ಮತ್ತು

ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಂಗಳವಾರ ತಿಳಿಸಿದ್ದಾರೆ.’ಪೆಟ್ರೋಲ್, ಡಿಸೆಲ್ ಮತ್ತು ಎಲ್‌ ಪಿಜಿ ದಾಸ್ತಾನು ಸಾಕಷ್ಟಿದ್ದು, ಜನರು ವದಂತಿ ನಂಬಿ ಆತಂಕದ ಖರೀದಿಗೆ ಮುಂದಾಗಬಾರದು. ಇಂಧನ ಬೆಲೆ ಯಥಾಸ್ಥಿತಿಯಲ್ಲಿ ಇರಲಿದೆ,” ಎಂದು ಆಶ್ವಾಸನೆ ನೀಡಿದ್ದಾರೆ.

ವಿಮಾನ ಹಾರಾಟಕ್ಕೆ ಬಳಸುವ ಇಂಧನ ‘ಎಟಿಎಫ್’ ದರ ದಾಖಲೆ ಕಾರ್ಯಾಚರಣೆಯನ್ನೇ ನಿಲ್ಲಿಸುವ ಪರಿಸ್ಥಿತಿ ಬಂದಿದೆ ಎಂದು ವಿಮಾನಯಾನ ಸಂಸ್ಥೆಗಳು ಸರಕಾರದ ಬಳಿ ಅಸಹಾಯಕತೆ ತೋಡಿ ಕೊಂಡಿವೆ. ಎಟಿಎಫ್ ಬೆಲೆ ಕಿಲೋ ಲೀಟರ್‌ಗೆ 2 ಲಕ್ಷ ರೂ. ದಾಟಿದ್ದು, ಕೆಲವೊಮ್ಮೆ ಜಾಗತಿಕ ಮಟ್ಟದಲ್ಲಿ ದರಇಳಿದರೂ ಭಾರತದಲ್ಲಿ ಕಡಿಮೆಯಾಗುತ್ತಿಲ್ಲ. ಕಾರ್ಯಾಚರಣೆಯಲ್ಲಿ ಭಾರಿ ನಷ್ಟವಾಗುತ್ತಿದೆ ಎಂದು ಏರ್ ಲೈನ್ಸ್ ಒಕ್ಕೂಟ ಸರಕಾರಕ್ಕೆ ಪತ್ರ ಬರೆದಿದೆ.

ತೈಲ ಕಂಪನಿಗಳಿಗೆ ಭಾರಿ ನಷ್ಟ

ಮೂಲಗಳ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾದರೂ ರೀಟೇಲ್ ದರ ಯಥಾಸ್ಥಿತಿಯಿಂದಾಗಿ ಸರಕಾರಿ ಸ್ವಾಮ್ಯದ ಇಂಧನ ಮಾರಾಟ ಸಂಸ್ಥೆಗಳು ಪ್ರತಿನಿತ್ಯ ಒಟ್ಟಾರೆ 2,400 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 20 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 100 ರೂ. ವರೆಗೂ ನಷ್ಟವಾಗುತ್ತಿದೆ ಎಂದು ಕೆಲ ದಿನಗಳ ಹಿಂದೆ ಪೆಟ್ರೋಲಿಯಂ ಸಚಿವಾಲಯವೇ ಹೇಳಿತ್ತು. 2022ರ ಏಪ್ರಿಲ್ ಬಳಿಕ ಪೆಟ್ರೋಲ್. ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿಲ್ಲ.

[t4b-ticker]
error: Content is protected !!