ಬ್ರಿಟಿಷರು ಇಲ್ಲದಿದ್ದರೆ, ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು: ಟ್ರಂಪ್ ಕಾಲೆಳೆದ ಬ್ರಿಟನ್‌ನ ಕಿಂಗ್ ಚಾರ್ಲ್ಸ್ III

Picture of Savistara

Savistara

Bureau Report

ವಾಷಿಂಗ್ಟನ್‌: ಶ್ವೇತ ಭವನದಲ್ಲಿ ನಡೆದ ಭೋಜನ ಕೂಟದಲ್ಲಿ ಬ್ರಿಟನ್‌ನ ಕಿಂಗ್ ಚಾರ್ಲ್ಸ್ II ಅವರು ಬ್ರಿಟಿಷರು ಇಲ್ಲದಿದ್ದರೆ, ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರಿಗೆ ತಮಾಷೆಯಾಗಿ ಹೇಳಿದ್ದಾರೆ.ಭೋಜನ ಕೂಟದಲ್ಲಿ ಪರಸ್ಪರ ಮಾತುಕತೆ ನಡೆಸುತ್ತಿದ್ದಾಗ ಚಾರ್ಲ್ಸ್ ಅವರು ದ್ವಿತೀಯ ವಿಶ್ವಯುದ್ಧದ ನಂತರ ಯುರೋಪಿಯನ್ ಮಿತ್ರ ರಾಷ್ಟ್ರಗಳು ರಕ್ಷಣಾ ವಿಷಯದಲ್ಲಿ ಅಮೆರಿಕದ ಮೇಲೆ ಅವಲಂಬಿತವಾಗಿವೆ ಎಂದು ಟ್ರಂಪ್ ಹಿಂದೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು.

“ಅಧ್ಯಕ್ಷರೇ, ಇತ್ತೀಚೆಗೆ ನೀವು ಅಮೆರಿಕ ಇಲ್ಲದಿದ್ದರೆ ಯುರೋಪ್ ರಾಷ್ಟ್ರಗಳ ಜನರು ಜರ್ಮನ್ ಮಾತನಾಡುತ್ತಿದ್ದರು ಎಂದು ಹೇಳಿದ್ದೀರಿ. ಆದ್ರೆ ನಾನು ಹೇಳುವುದೇನೆಂದರೆ, ನಾವಿಲ್ಲದಿದ್ದರೆ ನೀವು ಫ್ರೆಂಚ್ ಮಾತನಾಡುತ್ತಿದ್ದಿರಿ ಎಂದು ಕಿಂಗ್ ಚಾರ್ಲ್ಸ್ ಹೇಳಿದ್ದಾರೆ.ಉತ್ತರ ಅಮೆರಿಕಾದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಮೂಲ ಪ್ರದೇಶಗಳ ಬಗ್ಗೆ ಕಿಂಗ್ ಚಾರ್ಲ್ಸ್ III ಮಾತನಾಡಿದ್ದಾರೆ. 250 ವರ್ಷಗಳ ಹಿಂದೆ ಈ ಖಂಡದ ಮೇಲಿನ ನಿಯಂತ್ರಣಕ್ಕಾಗಿ ಈ ಎರಡು ವಸಾಹತುಶಾಹಿ ಶಕ್ತಿಗಳು ಹೋರಾಡಿದ್ದವು.ಜನವರಿಯಲ್ಲಿ ದಾವೋಸ್ ಶೃಂಗಸಭೆಯಲ್ಲಿ ಮಾತನಾಡಿದ್ದ ಟ್ರಂಪ್‌ ಎರಡನೇ ಮಹಾಯುದ್ಧದಲ್ಲಿ ಯುಎಸ್‌ ಸಹಾಯವಿಲ್ಲದಿದ್ದರೆ, ನೀವು ಜರ್ಮನ್ ಮತ್ತು ಜಪಾನ್ ಭಾಷೆ ಮಾತನಾಡುತ್ತಿದ್ದಿರಿ ಎಂದು ಹೇಳಿದ್ದರು.ಆದರೆ, ಕಿಂಗ್ ಚಾರ್ಲ್ಸ್ ॥ ಅವರ ಹಾಸ್ಯಭರಿತ ಈ ಹೇಳಿಕೆ, ಇರಾನ್ ಯುದ್ಧದ ವಿಷಯದಲ್ಲಿ ಉದ್ವಿಗ್ನತೆ ಇದ್ದರೂ, ಲಂಡನ್ ಮತ್ತು ವಾಷಿಂಗ್ಟನ್ ನಡುವಿನ “ವಿಶೇಷ ಸಂಬಂಧ”ವನ್ನು ಪ್ರತಿಬಿಂಬಿಸುತ್ತದೆ ಎಂದು ವರದಿಯಾಗಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!