ತಿರುವನಂತಪುರ: ಇಡೀ ದೇಶದ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಎಲ್‌ಡಿಎಫ್ ಕಸರತ್ತು ನಡೆಸಿದ್ದರೆ, ಈ ಬಾರಿ ‘ಕೈ’ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿ ಯುಡಿಎಫ್ ಇದೆ. ಈ ನಡುವೆ ಕೇಸರಿ ಪಡೆ ಉತ್ತಮ ಸಾಧನೆ ಮಾಡುವ ಆತ್ಮವಿಶ್ವಾಸದಲ್ಲಿದೆ.
ಮುಖ್ಯಾಂಶಗಳು:
- ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭ.
- ಆರಂಭದಲ್ಲಿ ಅಂಚೆ ಮತ ಎಣಿಕೆಆರಂಭಿಕ ಟ್ರೆಂಡ್ ಪ್ರಕಾರ ಯುಡಿಎಫ್‌ಗೆ ಮುನ್ನಡೆ
- ಯುಡಿಎಫ್‌ಗೆ 90, ಎಲ್‌ಡಿಎಫ್ 40 ಸ್ಥಾನಗಳಲ್ಲಿ ಮುನ್ನಡೆ
- ಧರ್ಮಡಂದಲ್ಲಿ ಸಿಎಂ ಪಿಣರಾಯಿಗೆ ಹಿನ್ನಡೆ
- ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹಿನ್ನಡೆ
- ಎನ್‌ಡಿಎಗೆ ಐದು ಕ್ಷೇತ್ರಗಳಲ್ಲಿ ಮುನ್ನಡೆ – ನೇಮಮ್, ಕಳಕೂಟಂ, ಮಂಜೇಶ್ವರ, ಪಾಲಕ್ಕಾಡ್ ಹಾಗೂ ಚಾತನೂರ್
ಮತದಾನದ ವಿವರ:
ಕೇರಳದಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಶೇ 79.70ರಷ್ಟು ಮತದಾನವಾಗಿತ್ತು. 2021ರಲ್ಲಿ ಶೇ. 76 ಇತ್ತು.
ಪಿಣರಾಯಿ ‘ಹ್ಯಾಟ್ರಿಕ್’ ಕನಸು, ಕಾಂಗ್ರೆಸ್‌ಗೆ ಅಸ್ತಿತ್ವದ ಸವಾಲು…
ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಈ ಬಾರಿ ಪಿಣರಾಯಿ ‘ಹ್ಯಾಟ್ರಿಕ್’ ಸಾಧನೆಯ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಲಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.ಎಡರಂಗದ ‘ನವಕೇರಳಂ’ ಅಭಿವೃದ್ಧಿ ಮಾದರಿ ಮತ್ತು ವಿವಿಧ ಕಲ್ಯಾಣ ಯೋಜನೆಗಳು ಸರ್ಕಾರದ ಬಲವಾದ ಅಸ್ತ್ರಗಳಾಗಿವೆ. ಆದರೆ, ನಿರುದ್ಯೋಗ, ದರ ಏರಿಕೆ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಮತ್ತು ರಾಜ್ಯದ ಸಾಲದ ಹೊರೆಯ ಬಗ್ಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ.
ಎಡರಂಗದ ‘ನವಕೇರಳಂ’ ಅಭಿವೃದ್ಧಿ ಮಾದರಿ ಮತ್ತು ವಿವಿಧ ಕಲ್ಯಾಣ ಯೋಜನೆಗಳು ಸರ್ಕಾರದ ಬಲವಾದ ಅಸ್ತ್ರಗಳಾಗಿವೆ. ಆದರೆ, ನಿರುದ್ಯೋಗ, ದರ ಏರಿಕೆ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಮತ್ತು ರಾಜ್ಯದ ಸಾಲದ ಹೊರೆಯ ಬಗ್ಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ.ಕಾಂಗ್ರೆಸ್ ಈ ಬಾರಿ ‘ಇಂದಿರಾ ಗ್ಯಾರಂಟಿ’ ಯೋಜನೆಗಳ ಮೂಲಕ ಮಹಿಳೆಯರು ಮತ್ತು ಯುವಕರನ್ನು ಸೆಳೆಯಲು ಮುಂದಾಗಿದೆ.
ಇನ್ನೊಂದೆಡೆ, ಬಿಜೆಪಿಯ ಎನ್‌ಡಿಎ ಕೂಟ ಕಳೆದ ಬಾರಿ ಕಳೆದುಕೊಂಡಿದ್ದ ಸ್ಥಾನಗಳನ್ನು ಮರಳಿ ಪಡೆಯಲು ಮತ್ತು ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳಲು ಭಾರಿ ಕಸರತ್ತು ನಡೆಸುತ್ತಿದೆ.
2021ರ ಫಲಿತಾಂಶ ಹೇಗಿತ್ತು? (ಒಟ್ಟು 140, ಮ್ಯಾಜಿಕ್ ಸಂಖ್ಯೆ: 71)
ಎಲ್‌ಡಿಎಫ್: 99
ಯುಡಿಎಫ್: 41
ಎನ್‌ಡಿಎ: 0










































