ಮುಳುವಾಯ್ತಾ ಅತಿಯಾದ ವಿಶ್ವಾಸ..: ತಮ್ಮ ಕ್ಷೇತ್ರದಲ್ಲೇ ಹಿನ್ನಡೆಯಲ್ಲಿ ಸ್ಟಾಲಿನ್, ಉಧಯನಿಧಿ

Picture of Savistara

Savistara

Bureau Report

ಚೆನ್ನೈ: ತಮಿಳುನಾಡು ರಾಜಕೀಯದ ಅಧ್ಯಾಯಬದಲಾಗುವಂತಹ ಫಲಿತಾಂಶ ಬರುತ್ತಿದೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರರೂಢ ಡಿಎಂಕೆ ಪಕ್ಷವು ಭಾರೀ ಹಿನ್ನಡೆ ಅನುಭವಿಸುತ್ತಿದ್ದು, ಪ್ರಮುಖ ನಾಯಕರೂ ಸೋಲಿನ ರುಚಿ ಅನುಭವಿಸುವ ಆತಂಕದಲ್ಲಿದ್ದಾರೆ.ಏಪ್ರಿಲ್ 23 ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಯ ಆರಂಭಿಕ ಸುತ್ತಿನ ನಂತರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಭದ್ರಕೋಟೆಯಾದ ಕೊಳತ್ತೂರು ಸ್ಥಾನದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.ಸತತ ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಸ್ಟಾಲಿನ್, ತಮಿಳಗ ವೆಟ್ರಿ ಕಳಗಂನ (ಟಿವಿಕೆ) ವಿ.ಎಸ್. ಬಾಬು ಅವರಿಗಿಂತ ಹಿನ್ನಡೆಯಲ್ಲಿದ್ದಾರೆ. ಎಐಎಡಿಎಂಕೆ ಅಭ್ಯರ್ಥಿ ಆರ್. ಸಂತನಕೃಷ್ಣನ್ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದಾರೆ.ಬಾಬು ಪ್ರಸ್ತುತ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ನಟ ವಿಜಯ್ ಪ್ರಾರಂಭಿಸಿದ ಚೊಚ್ಚಲ ಟಿವಿಕೆಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ಕೊಳತ್ತೂರು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರು 2011 ರಿಂದ ಗೆದ್ದು ಬಂದಿರುವ ಕ್ಷೇತ್ರ. 2021 ರಲ್ಲಿ, ಅವರು ಎಐಎಡಿಎಂಕೆಯ ಆದಿ ರಾಜಾರಾಮ್ ವಿರುದ್ಧ 70,384 ಮತಗಳ ಅಂತರದಿಂದ ಈ ಸ್ಥಾನವನ್ನು ಗೆದ್ದಿದ್ದರು. ಆದಿ ರಾಜಾರಾಮ್ ಈಗ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಪ್ರಸ್ತುತ ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ವಿರುದ್ಧ ಮುನ್ನಡೆಯಲ್ಲಿದ್ದಾರೆ.

ತಮಿಳುನಾಡಿನಲ್ಲಿ ವಿಜಯ್ ನಾಗಾಲೋಟ

ಆಡಳಿತಾರೂಢ ಡಿಎಂಕೆ ಮತ್ತು ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಗೆ ನಟ ವಿಜಯ್ ಅವರ ಟಿವಿಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ವಿಜಯ್ ಅವರ ಪಕ್ಷವು ಪ್ರಸ್ತುತ (11 ಗಂಟೆಗೆ) ರಾಜ್ಯದ 234 ಸ್ಥಾನಗಳಲ್ಲಿ 104 ಸ್ಥಾನಗಳಲ್ಲಿ ಮುಂದಿದೆ.ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಎಐಎಡಿಎಂಕೆ 75 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಡಿಎಂಕೆ 51 ಸ್ಥಾನಗಳಲ್ಲಿ ಮುಂದಿದೆ.ವಿಜಯ್ ತಮ್ಮ ಎರಡೂ ಸ್ಥಾನಗಳಾದ ತಿರುಚಿ (ಪೂರ್ವ) ಮತ್ತು ಪೆರಂಬೂರಿನಿಂದ ಮುನ್ನಡೆಯಲ್ಲಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!