ಕೇರಳ: ಇಂದು (ಮೇ.4) ಭಾರತದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೇರಳದ 140 ವಿಧಾನಸಭಾ ಕ್ಷೇತ್ರಗಳ (Kerala Election Results) ಭವಿಷ್ಯ ಇವತ್ತೇ ಹೊರಬೀಳಲಿದೆ.
ಯುಡಿಎಫ್ ಶತಕದತ್ತ ಓಟ!ಈ ಭಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಹಾಗೂ ಯುಡಿಎಫ್ ಮೈತ್ರಿಕೂಟ ಮತ ಎಣಿಕೆಯಲ್ಲಿ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸುವತ್ತ ಮುನ್ನುಗುತ್ತಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ!ಇತ್ತ ಜನಾದೇಶ ಸ್ಪಷ್ಟವಾಗುತ್ತಿದ್ದಂತೆ ಕೇರಳದ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಾಮಾಚರಣೆ ಪ್ರಾರಂಭವಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ, ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್ ಮತ್ತು ಶಶಿ ತರೂರ್ ಮೊದಲಾದವರು ಕಾರ್ಯಕರ್ತರೊಂದಿಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ.
ನಿರೀಕ್ಷೆಗೆ ಮೀರಿದ ಸಾಧನೆ: ಶಶಿ ತರೂರ್
ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ಲೋಕಸಭಾ ಸಂಸದ ಶಶಿ ತರೂರ್, ಈ ಭಾರಿ ಕೇರಳದ ಜನ ಬದಲಾವಣೆಯನ್ನು ಬಯಸಿದ್ದರು, ನಾವು ಮತ್ತು ಯುಡಿಎಫ್ ತುಂಬಾ ಪ್ರಯತ್ನ ಪಟ್ಟಿದ್ದೆವು. ಆದರೆ ಇದು ನಿರೀಕ್ಷಗೆ ಮೀರಿದ ಹಾಗೆ ಸಂಖ್ಯೆಗಳು ಕಾಣಿಸುತ್ತಿವೆ, ನನಗೆ ವೈಯಕ್ತಿಕವಾಗಿ ಸಂತಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಭಾರಿ 140 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯುಡಿಎಫ್ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ವಿಜಯನ್ ನೇತೃತ್ವದ ಎಲ್ಡಿಎಫ್ 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎನ್ಡಿಎ ಹಾಗೂ ಇತರೆ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆಲ್ಲುವ ಪಕ್ಷ ಸರ್ಕಾರ ರಚಿಸಲಿದ್ದು, ಯುಡಿಎಫ್ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಹಿನ್ನಲೆ ಗೆಲುವು ಬಹುತೇಕ ಖಚಿತವಾಗಿದೆ,










































