Bagalkote Bypoll: ಬಾಗಲಕೋಟೆ ‘ಕೈ’ವಶ: ಉಮೇಶ ಮೇಟಿಗೆ 21,866 ಮತಗಳ ಭರ್ಜರಿ ಜಯ!

Picture of Savistara

Savistara

Bureau Report

ಬಾಗಲಕೋಟೆ: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ(Bagalkote Bypoll) ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಐತಿಹಾಸಿಕ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರ ವಿರುದ್ಧ 21,866 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.

ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್‌ ಆರಂಭದಿಂದಲೂ ಅಜೇಯ ಮುನ್ನಡೆ ಕಾಯ್ದುಕೊಂಡಿತ್ತು. ಅಂತಿಮವಾಗಿ 23ನೇ ಸುತ್ತಿನ ಎಣಿಕೆ ಮುಕ್ತಾಯವಾದಾಗ ಉಮೇಶ ಮೇಟಿ ಅವರು ಬಿಜೆಪಿಯ ಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು.

ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್‌ ಆರಂಭದಿಂದಲೂ ಅಜೇಯ ಮುನ್ನಡೆ ಕಾಯ್ದುಕೊಂಡಿತ್ತು. ಅಂತಿಮವಾಗಿ 23ನೇ ಸುತ್ತಿನ ಎಣಿಕೆ ಮುಕ್ತಾಯವಾದಾಗ ಉಮೇಶ ಮೇಟಿ ಅವರು ಬಿಜೆಪಿಯ ಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು.ಮತ ಎಣಿಕೆ ವಿವರ

ಕಾಂಗ್ರೆಸ್ (ಉಮೇಶ ಮೇಟಿ): 97,941 ಮತಗಳು

ಬಿಜೆಪಿ (ವೀರಣ್ಣ ಚರಂತಿಮಠ): 76,075 ಮತಗಳು

ಗೆಲುವಿನ ಅಂತರ: 21,866 ಮತಗಳುಆ

ರಂಭದಿಂದಲೂ ‘ಮೇಟಿ’ ಹವಾಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಅಶೋಕ ತೇಲಿ ಹಾಗೂ ಚುನಾವಣಾಧಿಕಾರಿ ಸಂತೋಷ ಜಗಲಾಸಾರ್ ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು. ಮೊದಲು 260 ಅಂಚೆ ಮತಗಳು ಹಾಗೂ 154 ಸೇವಾ ಮತಗಳ ಎಣಿಕೆ ಆರಂಭವಾಯಿತು. ಇವಿಎಂ ಎಣಿಕೆ ಆರಂಭವಾದ ಮೊದಲ ಸುತ್ತಿನಲ್ಲೇ 3200 ಮತಗಳ ಲೀಡ್ ಪಡೆದ ಉಮೇಶ ಮೇಟಿ, ಆ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ.

ಸುತ್ತಿನಿಂದ ಸುತ್ತಿಗೆ ಏರಿದ ಅಂತರ

5ನೇ ಸುತ್ತು: ಕಾಂಗ್ರೆಸ್ 13,391 ಮತಗಳ ಮುನ್ನಡೆ.

6ನೇ ಸುತ್ತು: ಮುನ್ನಡೆ 15,457ಕ್ಕೆ ಏರಿಕೆ.

7ನೇ ಸುತ್ತು: ಈ ಹಂತದಲ್ಲಿ ಬಿಜೆಪಿ ಸ್ವಲ್ಪ ಚೇತರಿಕೆ ಕಂಡು ಅಂತರವನ್ನು 12,773ಕ್ಕೆ ಇಳಿಸಿಕೊಂಡರೂ, ಅದು ಕಾಂಗ್ರೆಸ್‌ನ ನಾಗಾಲೋಟವನ್ನು ತಡೆಯಲು ಸಾಧ್ಯವಾಗಲಿಲ್ಲ.

22ನೇ ಸುತ್ತು: ಕಾಂಗ್ರೆಸ್ ಮುನ್ನಡೆ 19,944ಕ್ಕೆ ತಲುಪಿ ಗೆಲುವು ಬಹುತೇಕ ಖಚಿತವಾಯಿತು.

ವಿಜಯೋತ್ಸವದ ಸಂಭ್ರಮ

ಉಮೇಶ ಮೇಟಿ ಅವರ ಮುನ್ನಡೆ ತಿಳಿಯುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಕ್ಷದ ಬಾವುಟಗಳನ್ನು ಬೀಸಿ, ಪಟಾಕಿ ಸಿಡಿಸಿ, ಜೈಕಾರ ಹಾಕುತ್ತಾ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು. ಅಂಚೆ ಮತಪತ್ರ ಹಾಗೂ 85 ವರ್ಷ ಮೇಲ್ಪಟ್ಟವರ ಮನೆಯ ಮತಗಳ ಅಂತಿಮ ಕ್ರೂಢೀಕರಣ ಪ್ರಕ್ರಿಯೆ ಬಾಕಿ ಇದ್ದರೂ, ಲೀಡ್ ಆಧಾರದ ಮೇಲೆ ಗೆಲುವು ಘೋಷಿತವಾಗಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!