ಸನಾತನ ಧರ್ಮ ವಿರೋಧಿಗಳಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ :ಪ್ರಸನ್ನ ದರ್ಬೆ

Picture of Savistara

Savistara

Bureau Report

ಪಂಚರಾಜ್ಯ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಧರ್ಮ ವಿರೋಧಿಗಳಿಗೆ, ಅನ್ಯಾಯ, ಅಕ್ರಮ ನಡೆಸುವವರನ್ನು ಕ್ಷಮಿಸಲು ಸಾಧ್ಯವಿಲ್ಲವೆಂದು ತಕ್ಕ ಉತ್ತರ ನೀಡಿದ್ದರೆಂದು ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ಮಮತಾ ಬ್ಯಾನರ್ಜಿ ಟಿಯಂಸಿ ಹಿಂದೂ ನಂಬಿಕೆಗೆ ಅಪಚಾರ, ಅಕ್ರಮಣಕಾರಿ ನೀತಿ, ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಈ ಎಲ್ಲಾ ದಮನಕಾರಿ ನೀತಿಗೆ ತಕ್ಕ ಉತ್ತರ ನೀಡಿದ್ದು, ಅಸ್ಸಾಂ ಲ್ಲಿ ಬಾಂಗ್ಲಾ ವಲಸಿಗರ ಮೇಲಿನ ಕಠಿಣ ಕ್ರಮಕ್ಕೆ ಮತದಾರರು ಬಿಜೆಪಿ ಗೆ ಮತ್ತೆ ಅಧಿಕಾರ ನೀಡಿದ್ದಾರೆ ಪುದುಚೇರಿ ಯಲ್ಲಿ ಎನ್ ಡಿಎ ಸರ್ಕಾರ ರಚಿಸಲಿದೆ.ತಮಿಳುನಾಡು ರಾಜ್ಯದಲ್ಲಿ ಆಡಳಿತ ನಡೆಸಿದ್ದ ಡಿಎಂಕೆಯ ನಾಯಕರು ಅನೇಕ ಬಾರಿ ಹಿಂದೂ ಸಂಪ್ರದಾಯ ಬಗ್ಗೆ ಹಗುರವಾದ ಹೇಳಿಕೆ ನೀಡುತ್ತ ಬಂದಿದ್ದು ಈ ಬಾರಿ ಮತದಾರ ಅವೆಲ್ಲವದಕ್ಕೆ ಉತ್ತರ ನೀಡಿದ್ದಾರೆ, ಕೇರಳ ದಲ್ಲಿ ಬಿಜೆಪಿ ಮೂರು ಸ್ಥಾನ ಗಳಿಸುವ ಮೂಲಕ ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಿದೆ ಈ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಸರ್ಕಾರದ ವಿಕಾಸಿತ ಭಾರತ ಕ್ಕೆ ಶಕ್ತಿ ನೀಡಿದೆ, ಜನ ಬಿಜೆಪಿ ಮೇಲೆ ವಿಶ್ವಾಸಹೊಂದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ ಯೆಂದು ಈ ಗೆಲುವು ಬಿಜೆಪಿ ಪಕ್ಷದ ಕಾರ್ಯಕರ್ತರ, ಸಂಘಟನೆಯ ಗೆಲುವೆಂದು ಪ್ರಸನ್ನ ದರ್ಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!